ADVERTISEMENT

ಮಹಾರಾಷ್ಟ್ರ | ಬಾರಾಮತಿಯಲ್ಲಿ ಎನ್‌ಸಿಪಿ ಸೋಲು: ಬಿಜೆಪಿ ಸವಾಲು

ಪಿಟಿಐ
Published 6 ಸೆಪ್ಟೆಂಬರ್ 2022, 14:26 IST
Last Updated 6 ಸೆಪ್ಟೆಂಬರ್ 2022, 14:26 IST
ಶರದ್‌ ಪವಾರ್‌ 
ಶರದ್‌ ಪವಾರ್‌    

ಪುಣೆ: ಬಿಜೆಪಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಮೈತ್ರಿಕೂಟವು2024ರ ಲೋಕಸಭೆ ಚುನಾವಣೆಯಲ್ಲಿ ಬಾರಾಮತಿ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂದುರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ್‌ ಬಾವನ್‌ಕುಳೆ ಅವರುನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷಕ್ಕೆ (ಎನ್‌ಸಿಪಿ) ಮಂಗಳವಾರ ಸವಾಲು ಹಾಕಿದರು.

ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರ ತವರು ನೆಲವಾದ ಬಾರಾಮತಿಯಲ್ಲೇ ಅವರು ಈ ಸವಾಲು ಎಸೆದಿರುವುದು ವಿಶೇಷವಾಗಿದೆ. ಬಾರಾಮತಿ ಜೊತೆಗೆ ರಾಜ್ಯದ 45ಕ್ಕೂ ಹೆಚ್ಚು ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಮೈತ್ರಿಕೂಟ ಜಯಗಳಿಸಲಿದೆ ಎಂದು ಚಂದ್ರಶೇಖರ್‌ ಹೇಳಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಾರಾಮತಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಪದಾಧಿಕಾರಿಗಳ ಜೊತೆ ಸಂವಹನ ನಡೆಸುವ ಸಲುವಾಗಿ ಅವರು ಇಲ್ಲಿಗೆ ಆಗಮಿಸಿದ್ದರು. ಆ ವೇಳೆ ಮರಾಠಿ ಸುದ್ದಿವಾಹಿನಿಯೊಂದರ ಎದುರು ಮಾತನಾಡಿದ ಅವರು, ಬಾರಾಮತಿ ಮತ್ತು ರಾಜ್ಯದ ಇತರ 15 ಲೋಕಸಭೆ ಕ್ಷೇತ್ರಗಳು ಸೇರಿ ದೇಶದಾದ್ಯಂತ 140 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ನೆಲೆಯನ್ನು ಗಟ್ಟಿಗೊಳಿಸಲು ಅಭಿಯಾನವೊಂದಕ್ಕೆ ಪಕ್ಷ ಚಾಲನೆ ನೀಡಿದೆ ಎಂದರು.

ADVERTISEMENT

ಚಂದ್ರಶೇಖರ್‌ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಎನ್‌ಸಿಪಿ, ಬಾರಾಮತಿಯ ಹಾಲಿ ಸಂಸದೆ ಸುಪ್ರಿಯಾ ಸುಳೆ ಅವರ ವಿರುದ್ಧ ಗೆಲ್ಲುವ ಹಗಲುಗನಸು ಕಾಣುವುದನ್ನು ಬಿಜೆಪಿ ನಿಲ್ಲಿಸಬೇಕು ಎಂದು ಹೇಳಿದೆ.

ಬಾರಾಮತಿಯು ಶರದ್‌ ಪವಾರ್‌ ಅವರ ತವರು ಕ್ಷೇತ್ರ. ಅವರ ಮಗಳು ಸುಪ್ರಿಯಾ ಸುಳೆ ಬಾರಾಮತಿಯ ಹಾಲಿ ಸಂಸದೆ ಮತ್ತು ಸೋದರಳಿಯ ಅಜಿತ್‌ ಪವಾರ್ ಅವರು ಶಾಸಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.