ADVERTISEMENT

ಮಹಾರಾಷ್ಟ್ರದಲ್ಲಿ ಮುಂದಿನ ಮೂರು ತಿಂಗಳಲ್ಲಿ ಬಿಜೆಪಿ ಸರ್ಕಾರ: ದಾನ್ವೆ

ಪಿಟಿಐ
Published 23 ನವೆಂಬರ್ 2020, 15:43 IST
Last Updated 23 ನವೆಂಬರ್ 2020, 15:43 IST
ರಾವ್‌ಸಾಹೆಬ್‌ ದಾನ್ವೆ
ರಾವ್‌ಸಾಹೆಬ್‌ ದಾನ್ವೆ   

ಔರಂಗಬಾದ್‌: ‘ಮಹಾರಾಷ್ಟ್ರದಲ್ಲಿ ಮುಂದಿನ ಎರಡು–ಮೂರು ತಿಂಗಳೊಳಗಾಗಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳು ನಡೆದಿವೆ’ ಎಂದು ಪಕ್ಷದ ಹಿರಿಯ ನಾಯಕ, ಕೇಂದ್ರ ಸಚಿವ ರಾವ್‌ಸಾಹೆಬ್‌ ದಾನ್ವೆ ಸೋಮವಾರ ಹೇಳಿದರು.

ಔರಂಗಬಾದ್‌ ಪದವೀಧರರ ಕ್ಷೇತ್ರದಲ್ಲಿ ನಡೆಯಲಿರುವ ವಿಧಾನ ಪರಿಷತ್‌ ಚುನಾವಣೆ ಪ್ರಚಾರ ಅಭಿಯಾನದಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಯೋಚಿಸಬಾರದು. ಮುಂದಿನ 2–3 ತಿಂಗಳಲ್ಲಿ ಅಲ್ಲಿ ನಾವು ಸರ್ಕಾರ ರಚಿಸುತ್ತೇವೆ. ಲೆಕ್ಕಾಚಾರಗಳನ್ನು ನಾವು ಮಾಡಿದ್ದು, ವಿಧಾನ ಪರಿಷತ್‌ ಚುನಾವಣೆ ಪೂರ್ಣಗೊಳ್ಳಲಿ ಎಂದು ಕಾಯುತ್ತಿದ್ದೇವೆ’ ಎಂದರು.

ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಬೆಂಬಲದೊಂದಿಗೆ ಕಳೆದ ವರ್ಷ ನ.23ರಂದು ದೇವೇಂದ್ರ ಫಡಣವೀಸ್‌ ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಸರ್ಕಾರ ಕೇವಲ 80 ಗಂಟೆ ಅಧಿಕಾರದಲ್ಲಿತ್ತು. ಇದಾಗಿ ಒಂದು ವರ್ಷದ ಬಳಿಕ, ದಾನ್ವೆ ಅವರು ಈ ಹೇಳಿಕೆ ನೀಡಿದ್ದಾರೆ. ಮೈತ್ರಿಯೊಳಗಿನ ಒಳಜಗಳದಿಂದಾಗಿಯೇ ಮಹಾವಿಕಾಸ ಅಘಾಡಿ ಸರ್ಕಾರವು ಪತನಗೊಳ್ಳಲಿದೆ ಎಂದು ಇತ್ತೀಚೆಗೆ ದೇವೇಂದ್ರ ಫಡಣವೀಸ್‌ ಅವರೇ ಹೇಳಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.