ADVERTISEMENT

ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ಅಧ್ಯಕ್ಷರ ನೇಮಿಸಲು ಬಿಜೆಪಿ ಒತ್ತಾಯ

ಪಿಟಿಐ
Published 27 ಆಗಸ್ಟ್ 2021, 11:58 IST
Last Updated 27 ಆಗಸ್ಟ್ 2021, 11:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಔರಂಗಾಬಾದ್: ‘ಮಹಾರಾಷ್ಟ್ರದ ರಾಜ್ಯ ಮಹಿಳಾ ಆಯೋಗಕ್ಕೆ ಅಧ್ಯಕ್ಷೆ ಮತ್ತು ಸದಸ್ಯರನ್ನು ಶೀಘ್ರವಾಗಿ ನೇಮಕ ಮಾಡಬೇಕು’ ಎಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಘಟಕ ಸರ್ಕಾರವನ್ನು ಒತ್ತಾಯಿಸಿದೆ.

‘ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರವು ಅಧಿಕಾರಕ್ಕೆ ಬಂದು 18 ತಿಂಗಳಾಗಿವೆ. ಆದರೆ, ಮಹಿಳಾ ಆಯೋಗಕ್ಕೆ ಇನ್ನೂ ಅಧ್ಯಕ್ಷೆಯನ್ನು ನೇಮಿಸಿಲ್ಲ. ಅಧ್ಯಕ್ಷೆಯ ಸ್ಥಾನವನ್ನು ಖಾಲಿ ಉಳಿಸಿ, ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವು ರಾಜ್ಯದ ಮಹಿಳೆಯರಿಗೆ ಅನ್ಯಾಯ ಮಾಡಿದೆ’ ಎಂದೂ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸವಿತಾ ಕುಲಕರ್ಣಿ ಟೀಕಿಸಿದ್ದಾರೆ.

‘ಮುಂಬೈ, ನಾಗ್ಪುರ, ಪಾಲ್ಘರ್ ಮತ್ತು ಸೊಲ್ಲಾಪುರದಲ್ಲಿ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರ ಮೇಲೆ ಅಪರಾಧಗಳು ನಡೆಯುತ್ತಿರುವಾಗ ರಾಜ್ಯ ಸರ್ಕಾರವು ರಾಜಕೀಯ ಸೇಡು ಕಾರ್ಯದಲ್ಲಿ ನಿರತವಾಗಿದೆ’ ಎಂದು ಅವರು ಪ್ರಕಟಣೆಯಲ್ಲಿ ದೂರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.