ADVERTISEMENT

ಡ್ರಗ್ಸ್‌ ಪ್ರಕರಣ: ಪಶ್ಚಿಮ ಬಂಗಾಳ ಬಿಜೆಪಿ ಯುವ ನಾಯಕಿ ಪಮೇಲಾ ಬಂಧನ

ಪಿಟಿಐ
Published 20 ಫೆಬ್ರುವರಿ 2021, 12:19 IST
Last Updated 20 ಫೆಬ್ರುವರಿ 2021, 12:19 IST
ಪಮೇಲಾ ಗೋಸ್ವಾಮಿ
ಪಮೇಲಾ ಗೋಸ್ವಾಮಿ   

ಕೋಲ್ಕತ್ತ : ಬಿಜೆಪಿ ಯುವ ನಾಯಕಿ ಪಮೇಲಾ ಗೋಸ್ವಾಮಿ ಮತ್ತು ಅವರ ಸ್ನೇಹಿತ ಪ್ರದೀಪ್‌ ಕುಮಾರ್‌ ದೇ ಅವರನ್ನು 90 ಗ್ರಾಂ ಕೊಕೈನ್‌ ಹೊಂದಿದ್ದ ಕಾರಣಕ್ಕೆ ಪೊಲೀಸರು ಬಂಧಿಸಿದ್ದಾರೆ.

‘ಇದರಲ್ಲಿ ಪಕ್ಷದ ತಮ್ಮ ಸಹದ್ಯೋಗಿಯಾದ ಮತ್ತು ಕೈಲಾಶ್ ವಿಜಯವರ್ಗಿಯಾ ಅವರ ಸಹಾಯಕರಾದ ರಾಕೇಶ್ ಸಿಂಗ್ ಅವರ ಪಿತೂರಿ ಇದೆ. ರಾಕೇಶ್‌ ಸಿಂಗ್‌ ಅವರನ್ನು ಬಂಧಿಸಬೇಕು. ಈ ಪ್ರಕರಣವನ್ನು ಸಿಐಡಿಗೆ ವಹಿಸಬೇಕು’ ಎಂದು ಬಂಧಿತೆ ಪಮೇಲಾ ಗೋಸ್ವಾಮಿ ಸಿಟಿ ಕೋರ್ಟ್‌ನಿಂದ ಪೊಲೀಸರು ಕರೆದೊಯ್ಯುವಾಗ ವರದಿಗಾರರಿಗೆ ತಿಳಿಸಿದ್ದಾರೆ.

ಬಿಜೆಪಿಯ ಜನತಾ ಯುವ ಮೋರ್ಚಾ (ಬಿಜೆವೈಎಂ) ರಾಜ್ಯ ಕಾರ್ಯದರ್ಶಿಯಾದ ಪಮೇಲಾ ತಮ್ಮ ವೈಯಕ್ತಿಕ ಭದ್ರತಾ ಸಿಬ್ಬಂದಿಯೂ ಆ ಪ್ರದೀಪ್‌ ಕುಮಾರ್‌ ದೇ ಜತೆಗೆ ದಕ್ಷಿಣ ಕೋಲ್ಕತ್ತದ ನ್ಯೂ ಅಲಿಪೋರ್‌ ಪ್ರದೇಶದಲ್ಲಿದ್ದಾಗ ಪಮೇಲಾ ಅವರ ಕೈಚೀಲದಲ್ಲಿ ಸುಮಾರು ಲಕ್ಷ ಮೌಲ್ಯದ ಕೊಕೈನ್‌ ಇರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಕಳೆದ ಒಂದೂವರೆ ವರ್ಷಕ್ಕೂ ಹೆಚ್ಚು ಸಮಯದಿಂದ ನಾನು ಪಮೇಲಾಗೋಸ್ವಾಮಿಯ ಸಂಪರ್ಕದಲ್ಲಿಲ್ಲ. ನಾನು ಯಾವುದೇ ತನಿಖೆ ಎದುರಿಸಲು ಸಿದ್ಧ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಕೋಲ್ಕತ್ತ ಪೊಲೀಸರು ತಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಪಮೇಲಾ ಅವರ ಬ್ರೈನ್ ವಾಶ್ ಮಾಡಿದ್ದಾರೆ’ ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ ರಾಕೇಶ್‌ ಸಿಂಗ್ ಆರೋಪಿಸಿದ್ದಾರೆ.

ಈ ಹಿಂದೆ ಬಿಜೆಪಿಯ ನಾಯಕರೊಬ್ಬರು ಮಕ್ಕಳ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿ, ಬಂಧನಕ್ಕೆ ಒಳಗಾಗಿದ್ದರು. ಈಗ ಮತ್ತೊಬ್ಬರು ಡ್ರಗ್ಸ್‌ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಬಿಜೆಪಿಯ ನಿಜ ಬಣ್ಣ ಬಯಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ ರಾಜ್ಯ ಪ್ರಧಾನಕಾರ್ಯದರ್ಶಿ ಪಾರ್ಥ ಚಟರ್ಜಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.