ADVERTISEMENT

ಚಂಡೀಗಢ: ಕೌನ್ಸಿಲರ್‌ಗಳ ಅಡ್ಡ ಮತದಾನ; ಬಿಜೆಪಿ ಅಭ್ಯರ್ಥಿ ಮೇಯರ್ ಆಗಿ ಆಯ್ಕೆ

ಪಿಟಿಐ
Published 30 ಜನವರಿ 2025, 10:00 IST
Last Updated 30 ಜನವರಿ 2025, 10:00 IST
<div class="paragraphs"><p>ಬಿಜೆಪಿ</p></div>

ಬಿಜೆಪಿ

   

ಚಂಡೀಗಢ: ಇಲ್ಲಿನ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಎಎಪಿ ಕೌನ್ಸಿಲರ್‌ಗಳು ಅಡ್ಡ ಮತದಾನ ಮಾಡಿದ್ದರಿಂದ ಬಿಜೆಪಿ ಅಭ್ಯರ್ಥಿ ಹರ್‌ಪ್ರೀತ್ ಕೌರ್ ಬಾಬ್ಲಾ ಹೊಸ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಬಿಜೆಪಿ ಅಭ್ಯರ್ಥಿ ಹರ್‌ಪ್ರೀತ್ ಕೌರ್ ಬಾಬ್ಲಾ 19 ಮತಗಳನ್ನು ಪಡೆದ ಹೊಸ ಮೇಯರ್ ಆಗಿ ಆಯ್ಕೆಯಾದರು. ಕಾಂಗ್ರೆಸ್ ಬೆಂಬಲಿತ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ಪ್ರೇಮ ಲತಾ 17 ಮತಗಳನ್ನು ಪಡೆದು ಸೋಲು ಕಂಡರು.

ADVERTISEMENT

ಇಂಡಿಯಾ ಮೈತ್ರಿಕೂಟದ ಮೂವರು ಕೌನ್ಸಿಲರ್‌ಗಳು ಬಿಜೆಪಿ ಪರವಾಗಿ ಅಡ್ಡ ಮತ ಚಲಾಯಿಸಿ ಫಲಿತಾಂಶವನ್ನು ಬದಲಾಯಿಸಿದರು.

ಚಂಡೀಗಢ ಪಾಲಿಕೆಯು 35 ಸ್ಥಾನಗಳನ್ನು ಹೊಂದಿದ್ದು, ಈ ಪೈಕಿ ಕಾಂಗ್ರೆಸ್‌–ಎಎಪಿ ಮೈತ್ರಿಕೂಟ 19, ಬಿಜೆಪಿ 16 ಸದಸ್ಯರನ್ನು ಹೊಂದಿದೆ.

ಕಾಂಗ್ರೆಸ್‌–ಎಎಪಿ ಮೈತ್ರಿಕೂಟ ಸುಲಭವಾಗಿ ಮೇಯರ್‌ ಚುನಾವಣೆ ಗೆಲ್ಲಬಹುದಾಗಿತ್ತು. ಈ ಮೈತ್ರಿಕೂಟಕ್ಕೆ ಕಾಂಗ್ರೆಸ್‌ ಸಂಸದ ತಿವಾರಿ ಮತದಾನ ಮಾಡುವ ಹಕ್ಕನ್ನು ಹೊಂದಿದ್ದರು. ಆದರೆ ಮೂವರು ಕೌನ್ಸಿಲರ್‌ಗಳು ಅಡ್ಡ ಮತದಾನ ಮಾಡಿದ್ದರಿಂದ ಗೆಲುವು ಬಿಜೆಪಿ ಪಾಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.