ಸ್ಪೀಕರ್ ನಂದ್ ಕಿಶೋರ್ ಯಾದವ್ ಮತ್ತು ಡೆಪ್ಯೂಟಿ ಸ್ಪೀಕರ್ ಮಹೇಶ್ವರ್ ಹಝ್ರಿ
ಪಟ್ನಾ: ಬಿಜೆಪಿ ಮುಖಂಡ ನಂದ ಕಿಶೋರ್ ಯಾದವ್ ಅವರು ಬಿಹಾರ ವಿಧಾನಸಭೆಯ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾದರು.
ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಇಬ್ಬರೂ ಸಭಾಧ್ಯಕ್ಷರ ಸ್ಥಾನದವರೆಗೆ ನಂದ ಕಿಶೋರ್ ಯಾದವ್ ಅವರನ್ನು ಗುರುವಾರ ಕರೆದುಕೊಂಡು ಹೋದರು. ಆನಂತರ ಇಬ್ಬರೂ ಅವರನ್ನು ಅಭಿನಂದಿಸಿದರು.
‘ನೀವು ಅನುಭವಸ್ಥ ನಾಯಕರು. ನಿಮ್ಮ ಆಯ್ಕೆಗಾಗಿ ಅಭಿನಂದನೆ. ಎಲ್ಲ ಶಾಸಕರೂ ನಿಮ್ಮನ್ನು ಬೆಂಬಲಿಸಿದ್ದಾರೆ. ಆಡಳಿತ ಹಾಗೂ ವಿರೋಧ ಪಕ್ಷ ಎರಡರ ಅಭಿಪ್ರಾಯಗಳನ್ನೂ ನೀವು ಆಲಿಸುವಿರಿ ಎನ್ನುವುದರಲ್ಲಿ ಅನುಮಾನವಿಲ್ಲ’ ಎಂದು ನಿತೀಶ್ ಕುಮಾರ್ ಹೇಳಿದರು. ತೇಜಸ್ವಿ ಯಾದವ್ ಸಹ ಈ ಅಭಿಪ್ರಾಯವನ್ನು ಪುನರುಚ್ಚರಿಸಿದರು. ಉಪ ಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಹಾಗೂ ವಿಜಯ್ ಕುಮಾರ್ ಸಿನ್ಹ ಅವರೂ ಹೊಸ ಸ್ಪೀಕರ್‌ಗೆ ಅಭಿನಂದನೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.