ADVERTISEMENT

ಎಲ್‌ಇಟಿ ಉಗ್ರರಿಂದ ಬಿಜೆಪಿ ಮುಖಂಡನ ಹತ್ಯೆ

ಪಿಟಿಐ
Published 10 ಆಗಸ್ಟ್ 2021, 4:15 IST
Last Updated 10 ಆಗಸ್ಟ್ 2021, 4:15 IST

ಶ್ರೀನಗರ: ಲಷ್ಕರ್‌–ಇ–ತಯಬಾ (ಎಲ್‌ಇಟಿ) ಉಗ್ರರು ಬಿಜೆಪಿ ಮುಖಂಡ ಮತ್ತು ಅವರ ಪತ್ನಿಯನ್ನು ಗುಂಡಿಕ್ಕಿ ಕೊಂದ ಘಟನೆ ಅನಂತ್‌ನಾಗ್‌ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಇದರಿಂದಾಗಿ ಈ ವರ್ಷ ಕಾಶ್ಮೀರದಲ್ಲಿ ಹತರಾದ ಬಿಜೆಪಿ ಸದಸ್ಯರ ಸಂಖ್ಯೆ ಐದಕ್ಕೆ ಏರಿದೆ.

ಗುಲಾಮ್‌ ರಸೂಲ್‌ ದಾರ್‌ ಮತ್ತು ಅವರ ಪತ್ನಿ ಜವ್ಹಾರಾ ಬೇಗಂ ಇಬ್ಬರೂ ಬಿಜೆಪಿ ಸರಪಂಚರಾಗಿದ್ದರು. ರಸೂಲ್‌ ಕುಲ್ಗಾಮ್‌ ಜಿಲ್ಲೆಯ ಕಿಸಾನ್‌ ಮೋರ್ಚಾದ ಜಿಲ್ಲಾ ಅಧ್ಯಕ್ಷರೂ ಆಗಿದ್ದರು. ಇಬ್ಬರೂ ಅನಂತ್‌ನಾಗ್‌ ಪಟ್ಟಣದ ಲಾಲ್‌ ಚೌಕ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮಧ್ಯಾಹ್ನ 4 ಗಂಟೆಗೆ ಬೈಕ್‌ನಲ್ಲಿ ಬಂದ ಇಬ್ಬರು ಉಗ್ರರು ಅವರ ಮನೆಗೆ ನುಗ್ಗಿ, ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಅಸ್ಪತ್ರೆಗೆ ದಾಖಲಿಸುವ ವೇಳೆಗಾಗಲೇ ಮೃತಪಟ್ಟಿದ್ದರು ಎಂದು ಪೊಲೀಸ್‌ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT