ADVERTISEMENT

ಕಪ್ಪು ಹಣ ಕಾಯ್ದೆ ದೆಹಲಿ ಹೈಕೋರ್ಟ್‌ ಆದೇಶಕ್ಕೆ ತಡೆ

ಪಿಟಿಐ
Published 21 ಮೇ 2019, 17:43 IST
Last Updated 21 ಮೇ 2019, 17:43 IST
   

ನವದೆಹಲಿ: ಕಪ್ಪು ಹಣ ನಿಯಂತ್ರಣ ಕುರಿತಾದ 2016ರ ಕಾಯ್ದೆಯನ್ನು 2015ರ ಜುಲೈಗೆ ಪೂರ್ವಾ ನ್ವಯಗೊಳಿಸಿದ್ದಕ್ಕೆ ಅವಕಾಶ ನಿರಾಕರಿಸಿರುವ ದೆಹಲಿ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

ಗಣ್ಯಾತಿಗಣ್ಯರ ಹೆಲಿಕಾಪ್ಟರ್ ಖರೀದಿ ಹಗರಣದ ಆರೋಪಿ ಗೌತಮ್‌ ಖೈತಾನ್‌ ಕಪ್ಪು ಹಣ ನಿಯಂತ್ರಣ ಕಾಯ್ದೆಯಲ್ಲಿನ ವಿವಿಧ ಅಂಶಗಳನ್ನು ಜಾರಿಗೊಳಿಸಿದ್ದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಈ ಬಗ್ಗೆ ಹೈಕೋರ್ಟ್‌ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ನ್ಯಾಯಾಲಯ ತಡೆ ನೀಡಿದ್ದು, ವಿಚಾರಣೆಗೂ ಒಪ್ಪಿಗೆ ನೀಡಿದೆ.

ಕಪ್ಪು ಹಣ ಮತ್ತು ತೆರಿಗೆ ವಿಧಿಸುವ ಕಾಯ್ದೆಯನ್ನು 2015ರ ಜುಲೈನಿಂದ ಜಾರಿಯಾಗುವಂತೆ ಕೇಂದ್ರ ಹೊರಡಿಸಿದ್ದ ಅಧಿಸೂಚನೆಗೆ ದೆಹಲಿ ಹೈಕೋರ್ಟ್‌ ತಡೆ ನೀಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.