ADVERTISEMENT

ಬಿಹಾರ| 40 ಜನರಿದ್ದ ದೋಣಿ ಮಗುಚಿ ಇಬ್ಬರು ಸಾವು; ಮುಂದುವರಿದ ಶೋಧ ಕಾರ್ಯ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 2:33 IST
Last Updated 4 ಅಕ್ಟೋಬರ್ 2019, 2:33 IST
ಎನ್‌ಡಿಆರ್‌ಎಫ್ ತಂಡದಿಂದ ಶೋಧ ಕಾರ್ಯ
ಎನ್‌ಡಿಆರ್‌ಎಫ್ ತಂಡದಿಂದ ಶೋಧ ಕಾರ್ಯ   

ಮಲಾಡ್ (ಪಶ್ಚಿಮ ಬಂಗಾಳ): ಬಿಹಾರ–ಬಂಗಾಳ ಗಡಿ ಸಮೀಪ ಮಹಾನಂದ್‌ ನದಿಯಲ್ಲಿ ದೋಣಿ ಮಗುಚಿಇಬ್ಬರು ಮೃತಪಟ್ಟಿದ್ದಾರೆ. ಸುಮಾರು 40 ಮಂದಿ ಪ್ರಯಾಣಿಕರು ದೋಣಿಯಲ್ಲಿದ್ದರು ಎಂದು ಅಂದಾಜಿಸಲಾಗಿದೆ.

ಗುರುವಾರ ಸಂಜೆ ಸುಮಾರು 7 ಗಂಟೆಗೆ ಈ ಘಟನೆ ನಡೆದಿದೆ. ಖಾಸಗಿ ದೋಣಿಯೊಂದು ಜಗನ್ನಾಥಪುರ ಘಾಟ್‌ನಿಂದ ಬಿಹಾರದ ಮುಕುಂದಪುರಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ಇಬ್ಬರು ಮೃತದೇಹ ಪತ್ತೆಯಾಗಿದೆ ಎಂದು ಮಲಾಡ್ ಪೊಲೀಸ್‌ ಜಿಲ್ಲಾ ವರಿಷ್ಠಾಧಿಕಾರಿ ಅಲೋಕ್‌ ರಜೊರಿಯಾ ತಿಳಿಸಿದರು.

‘ಇಲ್ಲಿಯವರೆಗೆ 28 ಮಂದಿಯನ್ನು ರಕ್ಷಿಸಲಾಗಿದ್ದು, ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ. ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಕಾರ್ಯಾಚರಣೆ ಆರಂಭಿಸಿದೆ. ದೋಣಿ ದುರಂತಕ್ಕೆ ಕಾರಣ ಹಾಗೂ ದೋಣಿಯಲ್ಲಿ ಎಷ್ಟು ಪ್ರಯಾಣಿಕರಿದ್ದರು ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ’ಎಂದರು.

ADVERTISEMENT

ಕಳೆದ ತಿಂಗಳು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಗೋದಾವರಿ ನದಿಯಲ್ಲಿ ಭೀಕರ ದೋಣಿ ದುರಂತ ಸಂಭವಿಸಿ 47 ಮಂದಿ ಜಲಸಮಾಧಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.