ADVERTISEMENT

ಬೊಕಾರೊ ವಲಯದಲ್ಲಿ ನಕ್ಸಲ್‌ ಚಟುವಟಿಕೆ ನಿರ್ಮೂಲನೆ: ಅಮಿತ್ ಶಾ

ಪಿಟಿಐ
Published 15 ಸೆಪ್ಟೆಂಬರ್ 2025, 17:17 IST
Last Updated 15 ಸೆಪ್ಟೆಂಬರ್ 2025, 17:17 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ/ರಾಂಚಿ: ಉತ್ತರ ಜಾರ್ಖಂಡ್‌ನ ಬೊಕಾರೊ ವಲಯದಲ್ಲಿ ನಕ್ಸಲ್‌ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಜಾರ್ಖಂಡ್‌ನ ಹಜಾರಿಬಾಗ್‌ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ ಭದ್ರತಾ ಪಡೆಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲರು ಮೃತಪಟ್ಟಿದ್ದಾರೆ.

ನಕ್ಸಲ್‌ ಕಮಾಂಡರ್‌ ಸಹದೇವ್‌ ಸೊರೇನ್‌ ಅಲಿಯಾಸ್‌ ಪರ್ವೇಶ್‌, ರಘುನಾಥ್‌ ಹೆಂಬ್ರಾಮ್‌ ಅಲಿಯಾಸ್‌ ಚಂಚಲ್‌ ಹಾಗೂ ಬಿರ್ಸೆನ್‌ ಗಂಜು ಅಲಿಯಾಸ್‌ ರಾಮ್ಖೇಲ್‌ವಾನ್‌ನನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಕೊಲ್ಲುವ ಮೂಲಕ ಈ ವಲಯದಲ್ಲಿ ನಕ್ಸಲ್‌ ಚಟುವಟಿಕೆಗಳನ್ನು ಅನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಿವೆ ಎಂದು ಶಾ ‘ಎಕ್ಸ್‌’ನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಸಹದೇವನ ಸುಳಿವು ನೀಡಿದವರಿಗೆ ₹1ಕೋಟಿ ಬಹುಮಾನ ಘೋಷಿಸಲಾಗಿತ್ತು. ಈತ ನಿಷೇಧಿತ ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿ ಸದಸ್ಯನಾಗಿದ್ದ. ಶೀಘ್ರದಲ್ಲೇ ದೇಶ ನಕ್ಸಲ್‌ ಸಮಸ್ಯೆಯಿಂದ ಮುಕ್ತವಾಗಲಿದೆ ಎಂದಿದ್ದಾರೆ.

‘ಈ ಪ್ರದೇಶದ ಸಮಿತಿ ಸದಸ್ಯನಾಗಿದ್ದ ರಘುನಾಥನ ಸುಳಿವು ನೀಡಿದವರಿಗೆ ₹25 ಲಕ್ಷ ಹಾಗೂ ವಲಯ ಸಮಿತಿ ಸದಸ್ಯನಾಗಿದ್ದ ಗಂಜುನ ಸುಳಿವು ನೀಡಿದವರಿಗೆ ₹10 ಲಕ್ಷ ಬಹುಮಾನ ಘೋಷಿಸಲಾಗಿತ್ತು’ ಎಂದು ಜಾರ್ಖಂಡ್‌ ಪೊಲೀಸ್‌ ಐಜಿ (ಕಾರ್ಯಾಚರಣೆ) ಹಾಗೂ ವಕ್ತಾರ ಮೈಕಲ್‌ ರಾಜ್‌ ಎಸ್‌., ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ಜಾರ್ಖಂಡ್‌ನ ಪಲಮು ಜಿಲ್ಲೆಯಲ್ಲಿ ಭಾನುವಾರ ನಡೆದ ನಕ್ಸಲ್‌ ನಿಗ್ರಹ ಕಾರ್ಯಾಚರಣೆಯಲ್ಲಿ ಮಾವೋವಾದಿಗಳ ನಿಷೇಧಿತ ಸಂಘಟನೆಯಾದ ತೃತೀಯ ಸಮ್ಮೇಳನ ಪ್ರಸ್ತುತಿ ಸಮಿತಿಯ (ಟಿಎಸ್‌ಪಿಸಿ) ಉಪ ವಲಯ ಕಮಾಂಡರ್‌ ಮುಖದೇವ್‌ ಯಾದವ್‌ (40) ಅಲಿಯಾಸ್‌ ತೂಫಾನ್‌ನನ್ನು ಹತ್ಯೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.