ADVERTISEMENT

ಬಾಲಿವುಡ್‌ ನಟ ಕುಶಾಲ್‌ ಪಂಜಾಬಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 20:43 IST
Last Updated 27 ಡಿಸೆಂಬರ್ 2019, 20:43 IST
ಕುಶಾಲ್‌ ಪಂಜಾಬಿ
ಕುಶಾಲ್‌ ಪಂಜಾಬಿ   

ಮುಂಬೈ: ಬಾಲಿವುಡ್‌ನಟ ಕುಶಾಲ್‌ ಪಂಜಾಬಿ (42) ಅವರು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಾಂದ್ರಾದಲ್ಲಿರುವ ಕುಶಾಲ್‌ ನಿವಾಸದಲ್ಲಿನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.ಕುಶಾಲ್‌ ಅವರಿಗೆ ಪತ್ನಿ ಮತ್ತು ಮೂರು ವರ್ಷದ ಪುತ್ರ ಇದ್ದಾರೆ.

ಫಿಟ್‌ನೆಸ್‌ ಫ್ರೀಕ್ ಆಗಿದ್ದ ಇವರು, ಹಲವು ಸಿನಿಮಾ, ಧಾರವಾಹಿ, ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಮೃತದೇಹದ ಬಳಿ ಪತ್ರ ಪತ್ತೆಯಾಗಿದೆ. ಆಸ್ತಿಯನ್ನು ಪೋಷಕರು, ಸಹೋದರಿ ಮತ್ತು ಮಗನಿಗೆ ಹಂಚುವಂತೆ ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.