ನವದೆಹಲಿ: ಮಹಾರಾಷ್ಟ್ರ ಬಿಜೆಪಿಯ ಮಾಜಿ ವಕ್ತಾರರಾದ ಆರತಿ ಅರುಣ್ ಸಾಠೆ ಸೇರಿದಂತೆ ಮೂವರು ವಕೀಲರನ್ನು ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ಬುಧವಾರ ನೇಮಕ ಮಾಡಲಾಗಿದೆ.
ಸಾಠೆ ಅವರು ಈ ಹಿಂದೆ ಬಿಜೆಪಿ ಮಹಾರಾಷ್ಟ್ರ ರಾಜ್ಯ ಘಟಕದ ವಕ್ತಾರರಾಗಿದ್ದರು. ಕಾನೂನು ಇಲಾಖೆ ಮಾಹಿತಿ ಪ್ರಕಾರ ಆರತಿ ಅರುಣ್ ಸಾಠೆ, ಸುಶಿಲ್ ಮನೋಹರ್ ಘೋಡೇಶ್ವರ್ ಮತ್ತು ಅಜಿತ್ ಭಗವಾನ್ ರಾವ್ ಕಡೆತನಕರ್ ಅವರನ್ನು ನ್ಯಾಯಮೂರ್ತಿಗಳಾಗಿ ನೇಮಿಸಲಾಗಿದೆ.
ಹೈಕೋರ್ಟ್‌ಗಳಿಗೆ ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಎರಡು ವರ್ಷಗಳ ಅವಧಿಗೆ ನೇಮಕ ಮಾಡಲಾಗುತ್ತದೆ. ಆ ಬಳಿಕ ಅವರಿಗೆ ಕಾಯಂ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.