ADVERTISEMENT

ವೈದ್ಯರ ಶಿಫಾರಸ್ಸಿನ ಮೇರೆಗೆ ಹಿರಿಯ ನಾಗರಿಕರಿಗೆ ಬೂಸ್ಟರ್‌ ಡೋಸ್‌: ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 19:52 IST
Last Updated 25 ಡಿಸೆಂಬರ್ 2021, 19:52 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ:ಕೊರೊನಾ ರೂಪಾಂತರಿ ‘ಓಮೈಕ್ರಾನ್‌’ ಸೋಂಕು ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿಕೋವಿಡ್‌–19 ಲಸಿಕೆ ಅಭಿಯಾನದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರಮಹತ್ತರ ಘೋಷಣೆಗಳನ್ನು ಮಾಡಿದರು.

ಹೆಚ್ಚುವರಿ (ಬೂಸ್ಟರ್‌) ಡೋಸ್‌ ಕುರಿತೂ ಅವರು ಈ ವೇಳೆ ಘೋಷಣೆಗಳನ್ನು ಮಾಡಿದರು. ದೇಶದ ಮುಂಚೂಣಿ ಕಾರ್ಯಕರ್ತರ ಜೊತೆ, ಒಂದಕ್ಕಿಂತ ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ 60 ವರ್ಷ ಮೇಲ್ಪಟ್ಟವರು ಮುನ್ನೆಚ್ಚರಿಕಾ ಕ್ರಮವಾಗಿ ಬೂಸ್ಟರ್‌ ಡೋಸ್‌ ಪಡೆಯಬಹುದು. ಆದರೆ ಅವರು ವೈದ್ಯರಿಂದ ಶಿಫಾರಸ್ಸು ಪಡೆದಿರಬೇಕು. ಅವರಿಗೂ ಜ.10 ರಿಂದಲೇ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.

ಕೋವಿಡ್‌ ವಿರುದ್ಧದ ಜಗತ್ತಿನ ಮೊದಲ ಡಿಎನ್‌ಎ ಲಸಿಕೆ ಮತ್ತು ಮೂಗಿನ ಮೂಲಕ ನೀಡಲಾಗುವ ಲಸಿಕೆಗಳನ್ನು ಸದ್ಯದಲ್ಲೇ ಭಾರತದಲ್ಲೂ ನೀಡಲಾಗುವುದು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.