ADVERTISEMENT

ಹೈಡ್ರಾಕ್ಸಿಕ್ಲೊರೊಕ್ವಿನ್ ರಫ್ತು ಮನವಿ ಪತ್ರದಲ್ಲಿ ರಾಮಾಯಣ ಉಲ್ಲೇಖಿಸಿದ ಬ್ರೆಜಿಲ್

ಅನಿರ್ಬನ್ ಭೌಮಿಕ್
Published 9 ಏಪ್ರಿಲ್ 2020, 8:27 IST
Last Updated 9 ಏಪ್ರಿಲ್ 2020, 8:27 IST
ಜೈರ್ ಬೋಲ್ಸನಾರೊ
ಜೈರ್ ಬೋಲ್ಸನಾರೊ   

ನವದೆಹಲಿ: ಕೋವಿಡ್ 19 ರೋಗಕ್ಕೆ ಸೂಕ್ತ ಔಷಧ ಕಂಡುಹಿಡಿಯಲು ಇನ್ನೂ ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ರೋಗದ ಚಿಕಿತ್ಸೆಗೆ ಮಲೇರಿಯಾ ನಿರೋಧಕ ಔಷಧ ಹೈಡ್ರಾಕ್ಸಿಕ್ಲೊರೊಕ್ವಿನ್ ಬಳಸಲಾಗುತ್ತದೆ. ಈ ನಡುವೆ ಭಾರತ ಹೈಡ್ರಾಕ್ಸಿಕ್ಲೊರೊಕ್ವಿನ್ ಮಾತ್ರೆ ಮೇಲಿನ ರಫ್ತು ನಿಷೇಧಗೊಳಿಸದಿದ್ದರೆ ಪ್ರತೀಕಾರ ತೀರಿಸಿಕೊಳ್ಳುವ ಬೆದರಿಕೆ ಒಡ್ಡಿತ್ತು ಅಮೆರಿಕ.ಅದೇ ವೇಳೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಔಷಧಿ ರಫ್ತು ಮಾಡಲು ಮನವಿ ಮಾಡಿದ್ದಾರೆ. ಈ ಪತ್ರದಲ್ಲಿ ಅವರುರಾಮಾಯಣದ ದೃಷ್ಟಾಂತವೊಂದನ್ನುಉಲ್ಲೇಖ ಮಾಡಿರುವುದು ವಿಶೇಷ.

ರಾಮಾಯಣದಲ್ಲಿ ಶ್ರೀರಾಮನ ಪರಮ ಭಕ್ತ ಹನುಮಂತ ಸಂಜೀವಿನಿ ಪರ್ವತದಿಂದ ಔಷಧ ತಂದು ರಾಮನ ಸಹೋದರ ಲಕ್ಷ್ಮಣನನ್ನು ಬದುಕಿಸಿದ್ದ. ಅದೇ ರೀತಿ ಜೀಸಸ್ (ಏಸು ಕ್ರಿಸ್ತ) ಕೂಡಾ ಅನಾರೋಗ್ಯ ಪೀಡಿತರನ್ನು ತನ್ನ ಆತ್ಮೀಯ ಸ್ಪರ್ಶದಿಂದ ಗುಣಪಡಿಸಿದ್ದ. ಈಗ ಭಾರತ ಕೂಡಾ ಕೋವಿಡ್‌ಗೆ ಸಂಜೀವಿನಿಯಂತಿರುವ ಹೈಡ್ರಾಕ್ಸಿಕ್ಲೊರೊಕ್ವಿನ್ ರಫ್ತು ಮಾಡಲು ಅನುವುಮಾಡಿಕೊಡುವ ಮೂಲಕ ಹನುಮಂತ ಸಂಜೀವಿನಿ ಪರ್ವತ ಹೊತ್ತು ತಂದಂತೆ ನಮ್ಮ ದೇಶಕ್ಕೂ ಹೈಡ್ರಾಕ್ಸಿಕ್ಲೊರೊಕ್ವಿನ್ ಔಷಧ ಬಂದು ತಲುಪುವಂತಾಗಲಿ ಎಂದು ಬೋಲ್ಸನಾರೊ ಪತ್ರದಲ್ಲಿ ಬರೆದಿದ್ದಾರೆ.

ಪ್ರಧಾನಿ ಮೋದಿ ಮತ್ತು ಬೋಲ್ಸನಾರೊ ಕೋವಿಡ್ -19 ಜಾಗತಿಕ ಪಿಡುಗು ಬಗ್ಗೆ ಭಾನುವಾರ ಫೋನ್ ಸಂಭಾಷಣೆ ನಡೆಸಿದ್ದರು. ಆ ವೇಳೆ ಹೈಡ್ರಾಕ್ಸಿಕ್ಲೊರೊಕ್ವಿನ್ ಔಷಧ ರಫ್ತು ಮಾಡುವ ಬಗ್ಗೆ ಬೋಲ್ಸನಾರೊ ಮೋದಿಯವರಲ್ಲಿ ಮನವಿ ಮಾಡಿದ್ದರು.ಇದಾದ ನಂತರ ಪತ್ರ ಬರೆದ ಅವರು ತಮ್ಮ ಪತ್ರದಲ್ಲಿ ರಾಮಾಯಣ ಮತ್ತು ಬೈಬಲ್‌ನ್ನು ಉಲ್ಲೇಖಿಸಿದ್ದಾರೆ.

ADVERTISEMENT

ಇಲ್ಲಿಯವರೆಗೆ ಬ್ರೆಜಿಲ್‌ನಲ್ಲಿ 12056 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 553 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.