ADVERTISEMENT

ಬ್ರಿಟಿಷ್ ವಸಾಹತುಶಾಯಿಯ 'ಕೋಮು' ತಂತ್ರವೇ ಈಗ ಬಳಕೆಯಾಗುತ್ತಿದೆ: ಪಿಣರಾಯಿ ವಿಜಯನ್

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 9:09 IST
Last Updated 2 ಫೆಬ್ರುವರಿ 2020, 9:09 IST
ಪಿಣರಾಯಿ ವಿಜಯನ್
ಪಿಣರಾಯಿ ವಿಜಯನ್   

ಮುಂಬೈ: ‘ಈಗ ಬಳಕೆಯಾಗುತ್ತಿರುವ ‘ಕೋಮು ಸಿದ್ಧಾಂತಗಳು’ ಬ್ರಿಟಿಷ್‌ ವಸಾಹತುಶಾಹಿಗಳು ಧರ್ಮದ ಆಧಾರದ ಮೇಲೆ ಜನರ ಒಗ್ಗಟ್ಟನ್ನು ಒಡೆಯಲು ಬಳಸುತ್ತಿದ್ದ ತಂತ್ರಗಳೇ ಆಗಿವೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಟೀಕಿಸಿದರು.

ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ‘ಕೋಮುವಾದ ವಿರುದ್ಧ ರಾಷ್ಟ್ರ ಹೋರಾಟ’ ವಿಷಯದ ಕುರಿತು ಅವರು ಮಾತನಾಡಿದರು.

‘ಭಾರತದ ಸ್ವಾತಂತ್ರ್ಯ ಹೋರಾಟ ವಸಹತುಶಾಹಿಯ ವಿರೋಧವೇ ಆಗಿತ್ತು. ಈಗಲೂ ಅದರ ವಿರುದ್ಧವೇ ಆಗಿದೆ. ಈ ವಸಾಹತುಶಾಹಿಗಳ ಜೊತೆ ನಿಂತವರ ವಿರುದ್ಧ ನಮ್ಮ ಚಳುವಳಿ’ ಎಂದು ಅವರು ಹೇಳಿದರು.

ADVERTISEMENT

‘ಹಿಂದೆ ಬ್ರಿಟಿಷರು ಧರ್ಮದ ಆಧಾರದಲ್ಲಿ ಜನರನ್ನು ಒಡೆದು ಒಗ್ಗಟ್ಟನ್ನು ಹಾಳು ಮಾಡಿ, ಭಾರತವನ್ನು ವಶದಲ್ಲಿಟ್ಟುಕೊಳ್ಳುವ ತಂತ್ರ ರೂಪಿಸಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.