ADVERTISEMENT

‘ಭಾರತ ವಿರೋಧಿ ಚಟುವಟಿಕೆ ಡೆಬ್ಬಿ ವೀಸಾ ರದ್ದತಿಗೆ ಕಾರಣ’

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 19:45 IST
Last Updated 18 ಫೆಬ್ರುವರಿ 2020, 19:45 IST
ಡೆಬ್ಬಿ ಅಬ್ರಹಾಮ್ಸ್‌
ಡೆಬ್ಬಿ ಅಬ್ರಹಾಮ್ಸ್‌   

ನವದೆಹಲಿ: ಬ್ರಿಟನ್‌ ಸಂಸದೆ ಡೆಬ್ಬಿ ಅಬ್ರಹಾಮ್ಸ್‌ ಅವರು ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವುದೇ ಅವರ ಇ– ವೀಸಾ ರದ್ದತಿಗೆ ಕಾರಣ ಎಂದು ಗೃಹ ಸಚಿವಾಲಯದ ಅಧಿಕಾರಿ
ಗಳು ಮಂಗಳವಾರ ತಿಳಿಸಿದ್ದಾರೆ.

ವೀಸಾ ರದ್ದುಪಡಿಸಿರುವ ಕುರಿತು ಫೆಬ್ರುವರಿ 14ರಂದೇ ಅಬ್ರಹಾಮ್ಸ್‌ ಅವರಿಗೆ ಮಾಹಿತಿ ನೀಡಲಾ
ಗಿತ್ತು. ಆದರೂ ಅವರು, ಭಾರತಕ್ಕೆ ಬಂದರು. ವೀಸಾ ನೀಡುವುದು, ತಿರಸ್ಕರಿಸಿರುವುದು, ರದ್ದುಪಡಿಸುವುದು ಆಯಾ ದೇಶದ ಹಕ್ಕು ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

ಅಬ್ರಹಾಮ್ಸ್‌ ಅವರಿಗೆ ‘ಇ–ಬ್ಯುಸಿನೆಸ್‌’ ವೀಸಾ ಅನ್ನು ಕಳೆದ ವರ್ಷ ಅಕ್ಟೋಬರ್‌ 7ರಂದು ನೀಡಲಾಗಿತ್ತು. 2020ರ ಅಕ್ಟೋಬರ್‌ 5ರವರೆಗೂ ಇದರ ಅವಧಿ ಇತ್ತು. ಆದರೆ, ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ಅವರು ಪಾಲ್ಗೊಂಡಿದ್ದಕ್ಕಾಗಿ ಸರ್ಕಾರ ವೀಸಾ ರದ್ದುಪಡಿಸಿದೆ ಎಂದು ತಿಳಿಸಿದ್ದಾರೆ.

ADVERTISEMENT

ಸೋಮವಾರ ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ ಮಾನ್ಯತೆ ಪಡೆದ ವೀಸಾ ಇರಲಿಲ್ಲ. ಹೀಗಾಗಿ, ಅವರನ್ನು ವಾಪಸ್‌ ಕಳುಹಿಸಲಾಗಿದೆ. ಬ್ರಿಟನ್‌ ನಾಗರಿಕರಿಗೆ ಇಲ್ಲಿಗೆ ಬಂದ ಬಳಿಕ ವೀಸಾ ನೀಡುವ ಸೌಲಭ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ದ್ವಂದ್ವ

ಸರ್ಕಾರದ ಕ್ರಮವನ್ನು ರಾಜ್ಯಸಭೆಯ ಕಾಂಗ್ರೆಸ್‌ ಸದಸ್ಯ ಅಭಿಷೇಕ್‌ ಮನು ಸಿಂಘ್ವಿ ಸ್ವಾಗತಿಸಿದ್ದಾರೆ. ಅಬ್ರಹಾಮ್ಸ್‌ ಅವರು ಪಾಕಿಸ್ತಾನ ಸರ್ಕಾರ ಮತ್ತು ಐಎಸ್‌ಐಗೆ ಆಪ್ತರಾಗಿದ್ದಾರೆ. ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲೇಬೇಕು ಎಂದು ಹೇಳಿದ್ದಾರೆ. ಆದರೆ, ಕಾಂಗ್ರೆಸ್‌ನ ಇನ್ನೊಬ್ಬ ಸಂಸದ ಶಶಿ ತರೂರ್‌, ಸರ್ಕಾರದ ಕ್ರಮವನ್ನು ಸೋಮವಾರ ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.