ADVERTISEMENT

ಉಗ್ರರ ಮಟ್ಟಹಾಕಲು ಭಾರತಕ್ಕೆ ಪೂರ್ಣ ಸಹಕಾರ: ಇಂಗ್ಲೆಂಡ್‌ ಎನ್‌ಎಸ್‌ಎ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2019, 11:11 IST
Last Updated 7 ಮಾರ್ಚ್ 2019, 11:11 IST
   

ನವದೆಹಲಿ:ಭಯೋತ್ಪಾದನೆ ನಿರ್ಮೂಲನೆಗೆ ಗುಪ್ತಚರ ಮಾಹಿತಿ ಹಂಚಿಕೊಳ್ಳುವುದು ಸೇರಿದಂತೆ ಎಲ್ಲಾ ಬಗೆಯ ಸಹಕಾರವನ್ನು ಭಾರತಕ್ಕೆ ನೀಡುವುದಾಗಿ ಇಂಗ್ಲೆಂಡ್‌ ಹೇಳಿದೆ.

ಈ ಸಂಬಂಧ ಇಂಗ್ಲೆಂಡ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್‌ಎಸ್‌ಎ) ಮಾರ್ಕ್‌ ಸೆಡ್ವಿಲ್‌ ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರ ಜತೆ ಮಾತನಾಡಿದ್ದಾರೆ.

ಪುಲ್ವಾಮದಲ್ಲಿ ಉಗ್ರರು ನಡೆಸಿದ ದಾಳಿಯ ಬಳಿಕ ಭಾರತಕ್ಕೆ ಬೆಂಬಲ ಸೂಚಿಸಿ ಮಾರ್ಕ್‌ ಸೆಡ್ವಿಲ್‌ ದೂರವಾಣಿ ಮೂಲಕ ಮಾತನಾಡಿ, ಭಯೋತ್ಪಾದನೆ ನಿಗ್ರಹಿಸುವ ವಿಷಯದಲ್ಲಿ ಒಗ್ಗಟ್ಟನ್ನು ತೋರಿದ್ದಾರೆ.

ADVERTISEMENT

‘ಭಾರತ ಉಗ್ರರ ವಿರುದ್ಧದ ಯಾವುದೇ ಬಗೆಯ ಕ್ರಮ ಕೈಗೊಂಡರೂ ಅದಕ್ಕೆ ಗುಪ್ತಚರ ಮಾಹಿತಿ ಹಂಚಿಕೊಳ್ಳುವುದು ಸೇರಿದಂತೆ ಎಲ್ಲಾ ರೀತಿಯ ಸಹಕಾರವನ್ನು ಇಂಗ್ಲೆಂಡ್‌ ಭಾರತಕ್ಕೆ ನೀಡಲಿದೆ’ ಎಂದು ಅಲ್ಲಿನ ಎನ್‌ಎಸ್‌ಎ ಹೇಳಿದ್ದಾಗಿ ಮೂಲಗಳು ಗುರುವಾರ ತಿಳಿಸಿವೆ.

ಪುಲ್ವಾಮದಲ್ಲಿ ಪಾಕಿಸ್ತಾನ ಮೂಲದ ಉಗ್ರರು ನಡೆಸಿದ ದಾಳಿಗೆ ಭಾರತೀಯ ಸಿಆರ್‌ಪಿಎಫ್‌ನ 40 ಯೋಧರು ಹುತಾತ್ಮರಾಗಿದ್ದಾರೆ. ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತಿದೆ.

ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಪಡೆ ಪಾಕಿಸ್ತಾನದಬಾಲಾಕೋಟ್‌ನಲ್ಲಿ ವಾಯು ದಾಳಿ ನಡೆಸಿ, ಉಗ್ರರ ತಾಣಗಳನ್ನು ಧ್ವಂಸಗೊಳಿಸಿದೆ.

ಇದಾದ ಮರುದಿನ ಪಾಕಿಸ್ತಾನ ಭಾರತೀಯ ಸೇನಾ ಕೇಂದ್ರಗಳನ್ನು ಗುರಿಯಾಗಿರಿಸಿ ದಾಳಿಗೆ ಯತ್ನಿಸಿತು. ಇದಕ್ಕೆ ಪ್ರತ್ಯುತ್ತರ ನೀಡಿದ ಭಾರತೀಯ ವಾಯುಪಡೆ ಪಾಕಿಸ್ತಾನದ ಎಫ್‌–16 ವಿಮಾನವನ್ನು ಹೊಡೆದುರುಳಿಸಿತು.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.