ADVERTISEMENT

ಆಗ್ರಾ | ನಾಲ್ಕು ಅಂಗಡಿಗಳ ಕುಸಿತ: ಇಬ್ಬರು ಸಹೋದರರ ಸಾವು, ಏಳು ಮಂದಿಗೆ ಗಾಯ

ಪಿಟಿಐ
Published 6 ಏಪ್ರಿಲ್ 2025, 3:22 IST
Last Updated 6 ಏಪ್ರಿಲ್ 2025, 3:22 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಆಗ್ರಾ (ಉತ್ತರ ಪ್ರದೇಶ): ಇಲ್ಲಿನ ಕಾಲೋನಿಯೊಂದರಲ್ಲಿ ನಾಲ್ಕು ಅಂಗಡಿಗಳು ಕುಸಿದು ಬಿದ್ದ ಪರಿಣಾಮ ಇಬ್ಬರು ಸಹೋದರರು ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಆಗ್ರಾದ ಸೆಕ್ಟರ್‌ 7ರ ಆವಾಸ್‌ ವಿಕಾಸ್‌ ಕಾಲೋನಿಯಲ್ಲಿ ಅಂಗಡಿಗಳ ನವೀಕರಣ ಮತ್ತು ದುರಸ್ತಿ ಕಾರ್ಯ ನಡೆಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸಂಜೀವ್‌ ತ್ಯಾಗಿ ಹೇಳಿದ್ದಾರೆ.

ಕಿಶನ್‌ ಉಪಾಧ್ಯಾಯ (65) ಮತ್ತು ವಿಷ್ಣು ಉಪಾಧ್ಯಾಯ (60) ಮೃತರು.

ಅಂಗಡಿಗಳ ಅವಶೇಷಗಳಡಿಯಲ್ಲಿ ಒಂಬತ್ತು ಮಂದಿ ಸಿಲುಕಿದ್ದರು. ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಶನ್‌ ಮತ್ತು ವಿಷ್ಣು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನಾಲ್ವರು ಸಹೋದರರ ಒಡೆತನದ ಅಂಗಡಿಗಳನ್ನು ಕೆಲವು ದಿನಗಳ ಹಿಂದೆ ದುರಸ್ತಿ ಕಾರ್ಯಕ್ಕಾಗಿ ಖಾಲಿ ಮಾಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.