ADVERTISEMENT

ಸಹೋದ್ಯೋಗಿ ಹತ್ಯೆ ಮಾಡಿದ ಯೋಧ

ಪಿಟಿಐ
Published 1 ಅಕ್ಟೋಬರ್ 2018, 18:04 IST
Last Updated 1 ಅಕ್ಟೋಬರ್ 2018, 18:04 IST

ಗಾಜಿಯಾಬಾದ್‌ : ಗಡಿ ಭದ್ರತಾ ಪಡೆಯ ಯೋಧ ಅಜಿತ್‌ ಅವರು, ಸಹೋದ್ಯೋಗಿ ಜಗಪ್ರೀತ್‌ ಎಂಬುವರನ್ನು ಸೋಮವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಗುರುಗ್ರಾಮದಲ್ಲಿರುವ ಗಡಿ ಕಾವಲು ಪಡೆಯ 95ನೇ ಬೆಟಾಲಿಯನ್‌ನ ಇಬ್ಬರನ್ನು ಗಾಜಿಯಾಬಾದ್‌ನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಿಯೋಜನೆ ಮಾಡಲಾಗಿತ್ತು.

ಇಬ್ಬರ ನಡುವೆ ಬೆಳಿಗ್ಗೆ ವಾಗ್ವಾದ ನಡೆದಿದ್ದು, ಸಿಟ್ಟಿಗೆದ್ದ ಅಜಿತ್‌ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.ಘಟನೆಗೆ ನಿಖರವಾದ ಕಾರಣ ತಿಳಿಯಲು ತನಿಖೆಗೆ ಆದೇಶ ನೀಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.