ADVERTISEMENT

ಪಾಕ್‌ನ ಇಬ್ಬರು ನುಸುಳುಕೋರರ ಹತ್ಯೆ

ಪಿಟಿಐ
Published 17 ಡಿಸೆಂಬರ್ 2020, 19:31 IST
Last Updated 17 ಡಿಸೆಂಬರ್ 2020, 19:31 IST

ನವದೆಹಲಿ: ‘ಪಾಕಿಸ್ತಾನದ ಇಬ್ಬರು ಶಸ್ತ್ರಸಜ್ಜಿತ ನುಸುಳುಕೋರರನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಯೋಧರು ಅಂತರರಾಷ್ಟ್ರೀಯ ಗಡಿಯ ಸಮೀಪ ಹತ್ಯೆಗೈದಿದ್ದಾರೆ’ ಎಂದು ಬಿಎಸ್‌ಎಫ್‌ ಗುರುವಾರ ತಿಳಿಸಿದೆ.

‘ಅಮೃತಸರದ ರಜತಲ್‌ ಗಡಿಯ ಸನಿಹ ಗುರುವಾರ ಮುಂಜಾನೆ2.20ರ ಸುಮಾರಿಗೆ ಇಬ್ಬರು ಶಂಕಾಸ್ಪದವಾಗಿ ಓಡಾಡುತ್ತಿದ್ದುದನ್ನು ಗಮನಿಸಿದ ಸಿಬ್ಬಂದಿ ಅವರನ್ನು ಹೊಡೆದುರುಳಿಸಿದ್ದಾರೆ’ ಎಂದು ಬಿಎಸ್‌ಎಫ್‌ ವಕ್ತಾರ ಹೇಳಿದ್ದಾರೆ.

‘ಸ್ಥಳದಲ್ಲಿ ಪರಿಶೀಲಿಸಿದಾಗ ಎಕೆ–56 ರೈಫಲ್‌, ಅರೆ ಸ್ವಂಯಚಾಲಿತ ರೈಫಲ್‌, ಪಿಸ್ತೂಲ್, 90 ಬುಲೆಟ್‌ಗಳು, 5 ಮ್ಯಾಗಜೀನ್‌ ಹಾಗೂ ಸುಮಾರು ಹತ್ತು ಅಡಿ ಉದ್ದದ ಎರಡು ಪಿವಿಸಿ ಪೈಪ್‌ಗಳು ದೊರೆತಿವೆ’ ಎಂದೂ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.