ಲಖನೌ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಬಿಜೆಪಿ ಜೊತೆ ಮೈತ್ರಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಮಾತಾನಾಡಿರುವ ಮಾಯಾವತಿ,ಬಿಜೆಪಿ ನೇತೃತ್ವದ ‘ಎನ್‌ಡಿಎ ಮೈತ್ರಿಕೂಟದಲ್ಲಾಗಲಿ, ಕಾಂಗ್ರೆಸ್ ನೇತೃತ್ವದ ಬಣದಲ್ಲಿ ಅಥವಾ ಯಾವುದೇ ಇತರ ರಂಗದಲ್ಲಾಗಲಿ ತಮ್ಮ ಪಕ್ಷ ಗುರುತಿಸಿಕೊಳ್ಳುವುದಿಲ್ಲ’ ಎಂದು ಬಹುಜನ ಸಮಾಜ ಪಕ್ಷದ (BSP) ನಾಯಕಿ ಮಾಯಾವತಿ ಸ್ಪಷ್ಟಪಡಿಸಿದ್ದಾರೆ
ಬಿಎಸ್‌ಪಿಯು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂಬ ವದಂತಿಗಳಿಗೆ ತೆರೆ ಎಳೆದಿರುವ ಅವರು, ‘ಸರ್ವಜನ ಹಿತಾಯ, ಸರ್ವಜನ ಸುಖಾಯ (ಎಲ್ಲರ ಹಿತ, ಎಲ್ಲರ ಸಂತೋಷ) ಎಂಬ ಅಂಬೇಡ್ಕರ್ ಸಿದ್ಧಾಂತಕ್ಕೆ ನಾನು ಬದ್ಧಳು’ ಎಂದಿದ್ದಾರೆ.
ದಲಿತರು, ಬುಡಕಟ್ಟು ಜನಾಂಗದವರು ಮತ್ತು ಒಬಿಸಿಗಳನ್ನು ಗುರಿಯಾಗಿಸಿಕೊಂಡು ಜಾತಿವಾದಿ ಮನಸ್ಥಿತಿಗಳು" ಬಿಎಸ್ಪಿಗೆ ರಾಜಕೀಯವಾಗಿ ಹಾನಿ ಮಾಡಲು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಅಭಿಯಾನ"ವನ್ನು ನಡೆಸುತ್ತಿದ್ದಾರೆ. ಈ ಸುಳ್ಳು ಸುದ್ದಿಗಳ ಬಗ್ಗೆ ಬಿಎಸ್ಪಿ ಕಾರ್ಯಕರ್ತರು ಎಚ್ಚರದಿಂದ ಇರಬೇಕು ಎಂದರು.
ಬಿಜೆಪಿ ಜೊತೆ ಮೈತ್ರಿಯಾಗಿಲ್ಲ ಎಂದು ಮಾಯಾವತಿ ತಮ್ಮ X ಖಾತೆ ಮೂಲಕ ಸ್ಪಷ್ಟ ಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.