ADVERTISEMENT

ಜಮ್ಮುವಿನ ಅಮೃತಸರ್–ಕತ್ರಾ ರಸ್ತೆಯಲ್ಲಿ ಬಸ್ ಅಪಘಾತ: 7 ಪ್ರಯಾಣಿಕರು ಸಾವು

ಜಮ್ಮು ಕಾಶ್ಮೀರದಲ್ಲಿ ಇಂದು ನಸುಕಿನ ಜಾವ ದುರ್ಘಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಮೇ 2023, 2:08 IST
Last Updated 30 ಮೇ 2023, 2:08 IST
ಅಪಘಾತವಾದ ಬಸ್
ಅಪಘಾತವಾದ ಬಸ್   

ಜಮ್ಮು: ಖಾಸಗಿ ಬಸ್‌ ಒಂದು ಸೇತುವೆಯಿಂದ ಉರುಳಿ ಬಿದ್ದು 7 ಪ್ರಯಾಣಿಕರು ಮೃತಪಟ್ಟಿರುವ ಘಟನೆ ಜಮ್ಮು ಕಾಶ್ಮೀರದ ಅಮೃತಸರ್–ಕತ್ರಾ ರಸ್ತೆಯಲ್ಲಿ ಇಂದು ನಸುಕಿನ ಜಾವ ನಡೆದಿದೆ.

ಅಮೃತರಸರದಿಂದ ಕತ್ರಾಗೆ ಬರುತ್ತಿದ್ದ ಬಸ್, ಕತ್ರಾ ಬಳಿ ಸೇತುವೆಯಿಂದ ಜಿಗಿದು ತಗ್ಗಿಗೆ ಬಿದ್ದಿದ್ದರಿಂದ ಈ ದುರಂತ ಸಂಭವಿಸಿದೆ. ಈ ಕುರಿತು ಸುದ್ದಿಸಂಸ್ಥೆ ಎಎನ್‌ಐ ಟ್ವೀಟ್ ಮಾಡಿದೆ.

ಸ್ಥಳದಲ್ಲೇ 7 ಜನ ಮೃತಪಟ್ಟಿದ್ದು, 4 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಕತ್ರಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಬಿಹಾರದವರು ಎಂದು ಜಮ್ಮುವಿನ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ADVERTISEMENT

ಮೃತದೇಹಗಳನ್ನು ಹೊರ ತೆಗೆಯುವ ಕಾರ್ಯಾಚರಣೆ ನಡೆಯುತ್ತಿದ್ದು, ಸ್ಥಳಕ್ಕೆ ಸಿಆರ್‌ಪಿಎಫ್‌ ಪರಿಹಾರ ಕಾರ್ಯಾಚರಣೆ ತಂಡವನ್ನು ಕಳಿಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ. ಕತ್ರಾ ಸ್ಥಳ ತ್ರಿಕೂಟ ಬೆಟ್ಟಗಳಿಗೆ ಖ್ಯಾತಿಯಾಗಿದ್ದು ಇಲ್ಲಿ ಪ್ರಸಿದ್ಧ ವೈಷ್ಣೋದೇವಿ ಮಂದಿರವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.