ಪಟ್ನಾ: ವಿಮಾನದ ವಾಷ್ರೂಮಿನಲ್ಲಿ ಸಿಗರೇಟು ಸೇದಿದ ಉದ್ಯಮಿಯೊಬ್ಬರನ್ನು ಬಂಧಿಸಿ, ನಂತರ ಬಿಡುಗಡೆ ಮಾಡಲಾಗಿದೆ.
ಬೆಂಗಳೂರಿಂದ ರಾಂಚಿಗೆ ತೆರಳುತ್ತಿದ್ದ ಇಂಡಿಗೊ 6ಇ 485 ವಿಮಾನದಲ್ಲಿ ಈ ಘಟನೆ ನಡೆದಿದೆ. ಬಂಧಿತ ದೀಪಕ್ ಕುಮಾರ್ ಜಾರ್ಖಂಡ್ನ ಹಜಾರಿಬಾಗ್ನಲ್ಲಿ ಆಟೊಮೊಬೈಲ್ ಏಜೆನ್ಸಿ ಹೊಂದಿದ್ದಾರೆ.
ಉದ್ಯಮಿ ವಾಷ್ರೂಮಿನಲ್ಲಿ ಸಿಗರೇಟು ಸೇದಲು ಆರಂಭಿಸಿದರು. ಹೊಗೆ ಸೆನ್ಸರ್ ಸೂಚನೆ ನೀಡಿದೆ. ಕ್ಯಾಪ್ಟನ್ ಈ ಕುರಿತು ಸಿಬ್ಬಂದಿ ಮತ್ತು ವಿಮಾನ ನಿಲ್ದಾಣದ ಮ್ಯಾಂಡರಿನ್ಗಳಿಗೆ ಮಾಹಿತಿ ನೀಡಿದರು ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.