ADVERTISEMENT

ಡ್ರಗ್ಸ್ ಪ್ರಕರಣ: ವಿಚಾರಣೆಗೆ ಹಾಜರಾದ ಉದ್ಯಮಿ ಕರಣ್ ಸಜ್ನಾನಿ

ಪಿಟಿಐ
Published 10 ನವೆಂಬರ್ 2021, 10:18 IST
Last Updated 10 ನವೆಂಬರ್ 2021, 10:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಡ್ರಗ್ಸ್‌ ಪ್ರಕರಣದಲ್ಲಿ ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಅಳಿಯ ಸಮೀರ್‌ ಖಾನ್‌ ಅವರೊಂದಿಗೆ ಶಾಮೀಲಾದ ಆರೋಪದಡಿ ಬಂಧಿಸಲಾಗಿರುವ ಉದ್ಯಮಿ ಕರಣ್ ಸಜ್ನಾನಿ ಬುಧವಾರ ಮಾದಕ ವಸ್ತು ನಿಯಂತ್ರಣ ಸಂಸ್ಥೆಯ ವಿಶೇಷ ತನಿಖಾ ತಂಡದ (ಎಸ್‌ಐಟಿ) ಎದುರು ವಿಚಾರಣೆಗೆ ಹಾಜರಾದರು.

ಮಂಗಳವಾರ ನೀಡಿದ ನೋಟಿಸ್‌ ಅನ್ವಯ ಸಜ್ನಾನಿ ಅವರು ಮಧ್ಯಾಹ್ನ 12ರ ವೇಳೆಗೆ ಇಲ್ಲಿನ ಎನ್‌ಸಿಬಿ ಕಚೇರಿ ತಲುಪಿದರು.

ಎನ್‌ಸಿಬಿಯ ಉಪ ಮಹಾನಿರ್ದೇಶಕ ಸಂಜಯ್ ಸಿಂಗ್ ನೇತೃತ್ವದ ಎಸ್‌ಐಟಿ ತಂಡ ಮಂಗಳವಾರ ಪ್ರಕರಣದ ಮರು ತನಿಖೆಯ ಪ್ರಕ್ರಿಯೆ ಪ್ರಾರಂಭಿಸಿದೆ. ಆಮದು ಮಾಡಿಕೊಂಡಿದ್ದ ಗಾಂಜಾವನ್ನು ಎನ್‌ಸಿಬಿ ವಶಪಡಿಸಿಕೊಂಡ ನಂತರ ಈ ವರ್ಷದ ಜನವರಿಯಲ್ಲಿ ಬ್ರಿಟಿಷ್ ಪ್ರಜೆ ಸಜ್ನಾನಿ ಅವರನ್ನು ಬಂಧಿಸಲಾಗಿತ್ತು.

ADVERTISEMENT

ಉಪನಗರ ಬಾಂದ್ರಾದಲ್ಲಿರುವ ಸಜ್ನಾನಿ ಮನೆಯ ಮೇಲೆ ಎನ್‌ಸಿಬಿ ದಾಳಿ ನಡೆಸಿ ಸುಮಾರು 200 ಕೆ.ಜಿಯಷ್ಟು ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.