ನವದೆಹಲಿ: ಸುಪ್ರೀಂಕೋರ್ಟ್‌ನ ಏಕೈಕ ಮಹಿಳಾ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಕೊಲಿಜಿಯಂನ ಸದಸ್ಯರಾಗಿದ್ದಾರೆ. ನ್ಯಾಯಮೂರ್ತಿ ಅಭಯ್ ಎಸ್ ಓಕಾ ನಿವೃತ್ತರಾದ ನಂತರ ಶನಿವಾರ ನಾಗರತ್ನ ಅವರು ಕೊಲಿಜಿಯಂನ ಭಾಗವಾದರು.
ಕರ್ನಾಟಕದ ಮಂಡ್ಯ ಜಿಲ್ಲೆ ಪಾಂಡವಪುರದವರಾದ ಬಿ.ವಿ.ನಾಗರತ್ನ ಅವರು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗುವ ಸರದಿಯಲ್ಲಿದ್ದಾರೆ. 2027ರ ಸೆಪ್ಟೆಂಬರ್ 23ರಂದು ದೇಶದ ಮೊದಲ ಮಹಿಳಾ ಸಿಜೆಐ ಆಗಿ ಬಿ.ವಿ.ನಾಗರತ್ನ ಅವರ ಕಾರ್ಯಭಾರ ಆರಂಭವಾಗಲಿದೆ. ಅವರ ಸೇವಾವಧಿ 2027ರ ಅಕ್ಟೋಬರ್ 29ರಂದು ಕೊನೆಗೊಳ್ಳಲಿದೆ.
ಕೊಲಿಜಿಯಂನಲ್ಲಿ ಸಿಜೆಐ ಬಿ.ಆರ್.ಗವಾಯಿ, ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಜೆ.ಕೆ.ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಇದ್ದಾರೆ. ಹಿರಿಯ ನ್ಯಾಯಮೂರ್ತಿಗಳ ಮಂಡಳಿಯು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ನ ನ್ಯಾಯಮೂರ್ತಿಗಳ ನೇಮಕಾತಿಗೆ ಹೆಸರುಗಳನ್ನು ಆಯ್ಕೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಿದೆ. ನ್ಯಾಯಮೂರ್ತಿಗಳ ವರ್ಗಾವಣೆಯನ್ನೂ ನಿರ್ಧರಿಸಲಿದೆ.
ನ್ಯಾಯಮೂರ್ತಿ ಅಭಯ್ ಎಸ್. ಓಕಾ ಅವರ ನಿವೃತ್ತಿಯಿಂದಾಗಿ ಸುಪ್ರೀಂಕೋರ್ಟ್‌ನಲ್ಲಿ ಮೂವರು ನ್ಯಾಯಮೂರ್ತಿಗಳ ಸ್ಥಾನ ಖಾಲಿ ಇರಲಿದೆ.
1962ರ ಅಕ್ಟೋಬರ್ 30ರಂದು ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಜನಿಸಿದ ಬಿ.ವಿ.ನಾಗರತ್ನ ಅವರು, ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ಇ.ಎಸ್. ವೆಂಕಟರಾಮಯ್ಯ ಅವರ ಪುತ್ರಿ.
1984ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಜೀಸಸ್ ಮತ್ತು ಮೇರಿ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಪದವಿ ಆನರ್ಸ್ ಪಡೆದಿದ್ದ ಬಿ.ವಿ.ನಾಗರತ್ನ ಅವರು, 1987ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಕಾನೂನು ಕೇಂದ್ರದಲ್ಲೇ ಎಲ್‌ಎಲ್‌ಬಿ ಮುಗಿಸಿದರು.
2008ರ ಫೆಬ್ರವರಿ 18ರಂದು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2010ರ ಫೆಬ್ರುವರಿ 17ರಂದು ಕಾಯಂ ನ್ಯಾಯಮೂರ್ತಿಯಾದರು. 2021ರ ಆಗಸ್ಟ್ 31ರಂದು ಬಿ.ವಿ.ನಾಗರತ್ನ ಅವರಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡಲಾಗಿತ್ತು.
ಬಿ.ವಿ.ನಾಗರತ್ನ ಅವರು ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ಇ.ಎಸ್. ವೆಂಕಟರಾಮಯ್ಯ ಅವರ ಪುತ್ರಿ. ಜನಿಸಿದ್ದು 30 ಅಕ್ಟೋಬರ್ 1962ರಲ್ಲಿ. 1987ರಲ್ಲಿ ವಕೀಲರಾಗಿ ಬೆಂಗಳೂರಿನಲ್ಲಿ ನೋಂದಣಿ ಮಾಡಿಸಿದರು. ಸಂವಿಧಾನ, ವಾಣಿಜ್ಯ, ವಿಮೆ ಮತ್ತು ಸೇವಾ ವಿಷಯಗಳ ಕ್ಷೇತ್ರದಲ್ಲಿ ಇವರು ಅಭ್ಯಾಸ (ಪ್ರಾಕ್ಟೀಸ್) ನಡೆಸಿದರು.
2008ರ ಫೆಬ್ರವರಿ 18ರಂದು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2010ರ ಫೆಬ್ರವರಿ 17ರಂದು ಖಾಯಂ ನ್ಯಾಯಮೂರ್ತಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.