ADVERTISEMENT

ನೀತಿ ಆಯೋಗದ ಸಿಇಒ ಆಗಿ ಬಿ.ವಿ.ಆರ್‌ ಸುಬ್ರಹ್ಮಣ್ಯಂ ನೇಮಕ

ಪಿಟಿಐ
Published 20 ಫೆಬ್ರುವರಿ 2023, 16:18 IST
Last Updated 20 ಫೆಬ್ರುವರಿ 2023, 16:18 IST
ಬಿ.ವಿ.ಆರ್‌ ಸುಬ್ರಮಣ್ಯಂ
ಬಿ.ವಿ.ಆರ್‌ ಸುಬ್ರಮಣ್ಯಂ   

ನವದೆಹಲಿ: ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಯನ್ನಾಗಿ (ಸಿಇಒ) ನಿವೃತ್ತ ಐಎಎಸ್‌ ಅಧಿಕಾರಿ ಬಿ.ವಿ.ಆರ್‌ ಸುಬ್ರಹ್ಮಣ್ಯಂ ಅವರನ್ನು ನೇಮಕ ಮಾಡಲಾಗಿದೆ. ಸದ್ಯ ಪರಮೇಶ್ವರನ್‌ ಅಯ್ಯರ್‌ ಅವರು ಈ ಹುದ್ದೆಯಲ್ಲಿದ್ದಾರೆ.

‘ಸುಬ್ರಹ್ಮಣ್ಯಂ ಅವರ ನೇಮಕಕ್ಕೆ ಸಚಿವ ಸಂಪುಟದ ನೇಮಕ ಸಮಿತಿಯು ಒಪ್ಪಿಗೆ ನೀಡಿದೆ. ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಎರಡು ವರ್ಷ ಸುಬ್ರಮಣ್ಯಂ ಅವರು ಈ ಹುದ್ದೆಯಲ್ಲಿರಲಿದ್ದಾರೆ’ ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯ ಆದೇಶದಲ್ಲಿ ಹೇಳಿದೆ.

ಐಎಎಸ್‌ನ 1987ನೇ ಬ್ಯಾಚ್‌ನವರಾದ ಸುಬ್ರಹ್ಮಣ್ಯಂ ಅವರು ಸದ್ಯ ಇಂಡಿಯಾ ಟ್ರೇಡ್‌ ಪ್ರಮೋಷನ್‌ ಆರ್ಗನೈಸೇಷನ್‌ನ (ಐಟಿಪಿಒ) ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. 2022ರ ಸೆ.30ರಂದು ಸುಬ್ರಹ್ಮಣ್ಯಂ ಅವರು ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು.

ADVERTISEMENT

ಪರಮೇಶ್ವರನ್‌ ಅಯ್ಯರ್‌ ಅವರು ವಿಶ್ವ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.