ADVERTISEMENT

2030ರ ವೇಳೆಗೆ ಭಾರತ ಎಲ್ಲಾ ಕ್ಷೇತ್ರದಲ್ಲೂ ಜಗತ್ತನ್ನು ಮುನ್ನಡೆಸಬಹುದು: ವರ್ಮಾ  

ಪಿಟಿಐ
Published 3 ಆಗಸ್ಟ್ 2021, 7:38 IST
Last Updated 3 ಆಗಸ್ಟ್ 2021, 7:38 IST
ರಿಚರ್ಡ್‌ ವರ್ಮಾ              -ಟ್ವಿಟರ್‌ ಚಿತ್ರ
ರಿಚರ್ಡ್‌ ವರ್ಮಾ              -ಟ್ವಿಟರ್‌ ಚಿತ್ರ   

ವಾಷಿಂಗ್ಟನ್‌: ‘2030ರ ವೇಳೆಗೆಭಾರತ ಪ್ರತಿಯೊಂದು ಕ್ಷೇತ್ರದಲ್ಲೂ ಜಗತ್ತನ್ನು ಮುನ್ನಡೆಸಬಹುದು. ವಿಶ್ವದ ಎರಡು ಅತಿದೊಡ್ಡ ಪ್ರಜಾಪ್ರಭುತ್ವದ ದೇಶಗಳಾದ ಅಮೆರಿಕ ಮತ್ತು ಭಾರತ ಒಗ್ಗೂಡಿದರೆ, ಇನ್ನಷ್ಟು ಹೆಚ್ಚು ಸಾಧನೆ ಮಾಡಬಹುದು’ ಎಂದು ಅಮೆರಿಕದ ಹಿರಿಯ ರಾಜತಾಂತ್ರಿಕ ರಿಚರ್ಡ್‌ ವರ್ಮಾ ಹೇಳಿದರು.

‘2030ರಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಜಗತ್ತನ್ನು ಮುನ್ನಡೆಸಲಿರುವ ಭಾರತ ನನಗೆ ಕಾಣುತ್ತಿದೆ. ಭಾರತವು ಹೆಚ್ಚು ಜನಸಂಖ್ಯೆ, ಕಾಲೇಜು ಪದವೀಧರರು, ಮಧ್ಯಮ ವರ್ಗದವರು, ಮೊಬೈಲ್‌ ಫೋನ್‌ ಮತ್ತು ಇಂಟರ್‌ನೆಟ್‌ ಬಳಕೆದಾರರನ್ನು ಹೊಂದಿದೆ. ಅಲ್ಲದೆ ಭಾರತವು ಮೂರನೇ ಅತಿದೊಡ್ಡ ಸೇನೆ ಮತ್ತು ಮೂರನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದೆ. ಜತೆಗೆ ದೇಶದಲ್ಲಿ 25 ವರ್ಷದೊಳಗಿನ 60 ಕೋಟಿ ಜನರಿದ್ದಾರೆ’ ಎಂದು ಅವರು ತಿಳಿಸಿದರು.

‘ಜಿಂದಾಲ್‌ ಯೂನಿವರ್ಸಿಟಿ ಸ್ಕೂಲ್‌ ಆಫ್‌ ಬ್ಯಾಂಕಿಂಗ್‌ ಆ್ಯಂಡ್‌ ಫೈನಾನ್ಸ್‌ನ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು,‘ ನಮ್ಮ ಕಣ್ಮುಂದೆಯೇಇವತ್ತು ಭಾರತದಲ್ಲಿ ಬೃಹತ್‌ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಮುಂದಿನ ದಶಕದಲ್ಲಿ ಮೂಲಸೌಕರ್ಯಕ್ಕಾಗಿ ಸುಮಾರು 2 ಲಕ್ಷ ಕೋಟಿ ಡಾಲರ್‌ ಖರ್ಚು ಮಾಡಲಾಗುವುದು. ಪ್ರಸ್ತುತ 100 ಹೊಸ ವಿಮಾನ ನಿಲ್ದಾಣಗಳು ಯೋಜನೆಅಥವಾ ನಿರ್ಮಾಣ ಹಂತದಲ್ಲಿವೆ’ ಎಂದು ಅವರು ಹೇಳಿದರು.

ADVERTISEMENT

‘ಮುಂದಿನ ದಿನಗಳಲ್ಲಿ ಭಾರತ–ಅಮೆರಿಕ ಜತೆಗೂಡಿ ಹೊಸ ಮೈಲಿಗಲ್ಲು ಸಾಧಿಸಬಹುದು. ಅದು ಸಾಂಕ್ರಾಮಿಕ, ಭಯೋತ್ಪಾದನೆ ವಿರುದ್ಧ ಹೋರಾಟವೇ ಇರಲಿ, ಆವಿಷ್ಕಾರಗಳ ಮೂಲಕ ಜನರ ಜೀವನವನ್ನು ಇನ್ನಷ್ಟು ಸರಳಗೊಳಿಸುವ ಕಾರ್ಯವೇ ಇರಲಿ. ನಾವು ಜತೆಯಾಗಿ ಎಲ್ಲವನ್ನೂ ಸಾಧಿಸಲು ಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.