ನಕ್ಸಲರು–ಪ್ರಾತಿನಿಧಿಕ ಚಿತ್ರ
ಗಡ್‌ಚಿರೋಲಿ: ಮಹಾರಾಷ್ಟ್ರದ ಗಢಚಿರೋಲಿ ಜಿಲ್ಲೆಯಲ್ಲಿ ಮಂಗಳವಾರ ನಕ್ಸಲರ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ಸಿ– 60 ಕಮಾಂಡೊ ಘಟಕದ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ.
ಡೈರಂಗಿ ಮತ್ತು ಫುಲ್ನರ್ ಗ್ರಾಮಗಳ ನಡುವೆ ನಕ್ಸಲರು ಶಿಬಿರ ಹೂಡಿರುವ ಬಗ್ಗೆ ಲಭಿಸಿದ ಗುಪ್ತಚರ ಮಾಹಿತಿ ಆಧರಿಸಿ ಸೋಮವಾರ 18 ಸಿ -60 ಘಟಕಗಳು ಮತ್ತು ಸಿಆರ್‌ಪಿಎಫ್‌ನ 2 ಕ್ಯುಎಟಿ ಘಟಕಗಳು ಕಾರ್ಯಾಚರಣೆ ನಡೆಸಿದವು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.