ADVERTISEMENT

ಆತ್ಮನಿರ್ಭರ್ ಭಾರತ್‌ ರೋಜ್‌ಗಾರ್ ಯೋಜನೆಗೆ ₹22,810 ಕೋಟಿ: ಸಂಪುಟ ಅನುಮೋದನೆ

ಪಿಟಿಐ
Published 9 ಡಿಸೆಂಬರ್ 2020, 11:36 IST
Last Updated 9 ಡಿಸೆಂಬರ್ 2020, 11:36 IST
ಸಾಂದರ್ಭಿಕ ಚಿತ್ರ – ಕೃಪೆ: ಐಸ್ಟಾಕ್
ಸಾಂದರ್ಭಿಕ ಚಿತ್ರ – ಕೃಪೆ: ಐಸ್ಟಾಕ್   

ನವದೆಹಲಿ: ಉದ್ಯಮ ಚಟುವಟಿಕೆಗೆ ಉತ್ತೇಜನ ಮತ್ತು ಹೊಸ ನೇಮಕಾತಿಗೆ ಪ್ರೋತ್ಸಾಹ ನೀಡುವ ಹೊಸ ಯೋಜನೆಗೆ ₹22,810 ಕೋಟಿ ವಿನಿಯೋಗಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

‘ಆತ್ಮನಿರ್ಭರ್ ಭಾರತ್ ರೋಜ್‌ಗಾರ್’ ಯೋಜನೆ ಅಡಿ ಸರ್ಕಾರವು, ಹೊಸದಾಗಿ ನೇಮಕಗೊಂಡ ಉದ್ಯೋಗಿಯ ನಿವೃತ್ತಿ ನಿಧಿಗೆ ಉದ್ಯೋಗಿ ಮತ್ತು ಉದ್ಯೋಗದಾತರ ಎರಡು ವರ್ಷಗಳ ಪಾಲನ್ನು ಭರಿಸಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ತಿಳಿಸಿದ್ದಾರೆ.

ಈ ಯೋಜನೆಗೆ 2023ರ ವರೆಗೆ ₹22,810 ಕೋಟಿ ವಿನಿಯೋಗಿಸಲಾಗುತ್ತಿದ್ದು, 58.5 ಲಕ್ಷ ಉದ್ಯೋಗಿಗಳಿಗೆ ನೆರವಾಗಲಿದೆ ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.