ADVERTISEMENT

ಕ್ಯಾಲಿಕಟ್‌ ವಿ.ವಿ: ಕಳೆದ ವರ್ಷದ ಪ‍್ರಶ್ನೆಪತ್ರಿಕೆ ಪುನರಾವರ್ತನೆ

ಪಿಟಿಐ
Published 27 ನವೆಂಬರ್ 2025, 13:09 IST
Last Updated 27 ನವೆಂಬರ್ 2025, 13:09 IST
   

ಕೋಯಿಕ್ಕೋಡ್‌, ಕೇರಳ: ಕ್ಯಾಲಿಕಟ್‌ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಪದವಿಪೂರ್ವ ಬಹುಶಿಸ್ತೀಯ ಕೋರ್ಸ್‌ನ ಪರೀಕ್ಷೆಗೆ ಕಳೆದ ವರ್ಷದ ಪ್ರಶ್ನೆಪತ್ರಿಕೆಯನ್ನೇ ನೀಡಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಗುರುವಾರ ಖಚಿತಪಡಿಸಿದ್ದಾರೆ.

‘ಈ ವಿಷಯವು ನನ್ನ ಗಮನಕ್ಕೆ ಬಂದಿದ್ದು, ಹೊಸತಾಗಿ ಪರೀಕ್ಷೆ ನಡೆಸುವ ಕುರಿತಂತೆ ಆಡಳಿತ ಮಂಡಳಿಯ ಮುಂದೆ ಪ್ರಸ್ತಾಪಿಸಿ, ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ವಿ.ವಿಯ ಅಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್‌ 25ರಂದು ನಡೆದ ಮೊದಲ ಸೆಮಿಸ್ಟರ್‌ನ ಮನಃಶಾಸ್ತ್ರದ ‘ಒತ್ತಡ ನಿರ್ವಹಣೆಯ ಕಲೆ’ಯ ಕುರಿತಾದ ಪರೀಕ್ಷೆ ವೇಳೆ ಕಳೆದ ವರ್ಷದ ಪ್ರಶ್ನೆಪತ್ರಿಕೆಯನ್ನು ನೀಡಲಾಗಿತ್ತು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರಶ್ನೆಗಳು ಪುನಾರವರ್ತನೆಯಾಗಿರುವುದನ್ನು ಗಮನಕ್ಕೆ ತಂದಿದ್ದರು. ಇದುವರೆಗೂ ಅಧಿಕೃತ ದೂರುಗಳು ದಾಖಲಾಗಿಲ್ಲ. ಶಿಕ್ಷಕರು ಪರೀಕ್ಷೆಗೂ ಮುನ್ನ ಮೂರು ಮಾದರಿಯ ಪ್ರಶ್ನೆಪತ್ರಿಕೆಗಳನ್ನು ಸಲ್ಲಿಸುತ್ತಾರೆ. ಇದರಲ್ಲಿ ಒಂದು ಪ್ರಶ್ನೆಪತ್ರಿಕೆ ಹಳೆಯದ್ದೇ ಆಗಿತ್ತು. ಪರಿಶೀಲನೆ ವೇಳೆ ಇದು ಬೆಳಕಿಗೆ ಬಂದಿರಲಿಲ್ಲ ಎಂದು ಅವರು ವಿವರಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.