ನವದೆಹಲಿ: ಕಳೆದ ಮಂಗಳವಾರ ಪ್ರಕಟಗೊಂಡ ಯುಪಿಎಸ್ಸಿ ಪರೀಕ್ಷೆ ಫಲಿತಾಂಶದಲ್ಲಿ 44 ನೇ (ಆಲ್ ಇಂಡಿಯಾ) ರ್ಯಾಂಕ್ ಅನ್ನು ತಮ್ಮದು ಎಂದು ಇಬ್ಬರು ಹೇಳಿಕೊಂಡಿರುವುದಾಗಿ ವರದಿಯಾಗಿದೆ.
ಹೌದು, ತುಷಾರ್ ಕುಮಾರ್ ಎಂಬ ಹೆಸರಿನ ಇಬ್ಬರು ಈ ಕ್ಲೈಮ್ ಅನ್ನು ಮಾಡಿದ್ದಾರೆ. ಒಬ್ಬರು ಬಿಹಾರದವರಾದರೆ, ಇನ್ನೊಬ್ಬರು ಹರಿಯಾಣದವರು. ಈ ಇಬ್ಬರೂ ಕೂಡ ಸಂದರ್ಶನ ಎದುರಿಸಿದ್ದರು. ಇಬ್ಬರದೂ ಒಂದೇ ರೋಲ್ ನಂಬರ್, ಒಂದೇ ಹೆಸರು ಆಗಿತ್ತು.
ಇದೀಗ 44ನೇ ರ್ಯಾಂಕ್ ಗೊಂದಲ ಮೂಡಿಸಿದ್ದು ಇಬ್ಬರೂ ಯುಪಿಎಸ್ಸಿಗೆ ಅಹವಾಲು ಸಲ್ಲಿಸಿದ್ದು ಗೊಂದಲ ಬಗೆಹರಿಸುವಂತೆ ಕೇಳಿಕೊಂಡಿದ್ದಾರೆ. ಈ ಇಬ್ಬರೂ ‘44ನೇ ರ್ಯಾಂಕ್ ಬಂದಿರೋದು ನಾನು, ಅವನಲ್ಲ’ ಎಂದು ಸ್ಥಳೀಯ ಮಾಧ್ಯಮಗಳ ಎದುರು ಹೇಳಿಕೊಂಡಿದ್ದು, ದೂರು ನೀಡುವುದಾಗಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.