ADVERTISEMENT

ಅಮರಿಂದರ್‌, ದಿಂಡ್ಸಾ ಪಕ್ಷದ ಜತೆಗೆ ಬಿಜೆಪಿ ಜಂಟಿ ಪ್ರಣಾಳಿಕೆ

ಪಿಟಿಐ
Published 27 ಡಿಸೆಂಬರ್ 2021, 16:09 IST
Last Updated 27 ಡಿಸೆಂಬರ್ 2021, 16:09 IST
ಅಮಿತ್‌ ಶಾ, ಅಮರಿಂದರ್‌ ಸಿಂಗ್‌ ಮತ್ತು ಸುಖದೇವ್‌ ಸಿಂಗ್ ದಿಂಡ್ಸಾ ಅವರು ಭೇಟಿಯಾಗಿ ಸೋಮವಾರ ಚರ್ಚೆ ನಡೆಸಿದರು ಪಿಟಿಐ ಚಿತ್ರ
ಅಮಿತ್‌ ಶಾ, ಅಮರಿಂದರ್‌ ಸಿಂಗ್‌ ಮತ್ತು ಸುಖದೇವ್‌ ಸಿಂಗ್ ದಿಂಡ್ಸಾ ಅವರು ಭೇಟಿಯಾಗಿ ಸೋಮವಾರ ಚರ್ಚೆ ನಡೆಸಿದರು ಪಿಟಿಐ ಚಿತ್ರ   

ನವದೆಹಲಿ: ಪಂಜಾಬ್‌ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರ ಪಂಜಾಬ್‌ ಲೋಕ ಕಾಂಗ್ರೆಸ್‌ ಮತ್ತು ಸುಖದೇವ್‌ ದಿಂಡ್ಸಾ ಅವರ ಶಿರೋಮಣಿ ಅಕಾಲಿ ದಳ (ಸಂಯುಕ್ತ) ಪಕ್ಷಗಳ ಜೊತೆ ಸೇರಿ ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಬಿಜೆಪಿ ಅಧಿಕೃತವಾಗಿ ಘೋಷಿಸಿದೆ.ಈ ಪಕ್ಷಗಳೆಲ್ಲಾ ಸೇರಿ ಜಂಟಿ ಪ್ರಣಾಳಿಕೆ ಹೊರಡಿಸುವುದಾಗಿ ಕೇಂದ್ರ ಸಚಿವ, ಪಂಜಾಬ್‌ ವಿಧಾನಸಭೆ ಚುನಾವಣೆಗೆ ಬಿಜೆಪಿ ಉಸ್ತುವಾರಿ ಗಜೇಂದ್ರ ಸಿಂಗ್‌ ಶೆಖಾವತ್‌ ಸೋಮವಾರ ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಕ್ಯಾ. ಅಮರೀಂದರ್‌ ಸಿಂಗ್‌ ಮತ್ತು ದಿಂಡ್ಸಾ ಅವರು ಶಾ ಅವರನಿವಾಸದಲ್ಲಿ ನಡೆದ ಸಭೆಯಲ್ಲಿ ಭೇಟಿ ಮಾಡಿದ್ದರು. ಆ ವೇಳೆ ಮೂರು ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಕುರಿತು ನಿರ್ಧರಿಸಲಾಯಿತು. ಮೂರೂ ಪಕ್ಷಗಳ ಇಬ್ಬರು ನಾಯಕರಿರುವ ಜಂಟಿ ಸಮಿತಿ ರಚಿಸಿ ಸೀಟು ಹಂಚಿಕೆ ಕುರಿತು ನಿರ್ಧರಿಸಲಾಗುವುದು ಎಂದು ಶೆಖಾವತ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT