ADVERTISEMENT

ನಿರ್ಲಕ್ಷ್ಯದಿಂದ ಕೋವಿಡ್–19 ಹೆಚ್ಚಳ ಎಂದ ತಜ್ಞರು

ಪಿಟಿಐ
Published 30 ಆಗಸ್ಟ್ 2020, 13:17 IST
Last Updated 30 ಆಗಸ್ಟ್ 2020, 13:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭೋಪಾಲ್: ಮಧ್ಯ ಪ್ರದೇಶದಲ್ಲಿ ಕೋವಿಡ್–19 ಸೋಂಕು ಹೆಚ್ಚಾಗಲು ಜನರ ನಿರ್ಲಕ್ಷ್ಯವೇ ಕಾರಣ ಎಂದು ತಜ್ಞರು ಮತ್ತು ಸರ್ಕಾರಿ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ಕಳೆದೆರಡು ತಿಂಗಳುಗಳಲ್ಲಿ ಸೋಂಕು ಪ್ರಕರಣ ಶೇ 78ರಷ್ಟು ಹೆಚ್ಚಾಗಿದೆ.

ಸೆಪ್ಟೆಂಬರ್‌ 21ರಿಂದ 100 ಜನ ಸೇರುವ ಸಭೆ–ಸಮಾರಂಭಗಳನ್ನು ಆಯೋಜಿಸಬಹುದು ಎಂಬ ಸರ್ಕಾರದ ಮಾರ್ಗಸೂಚಿ ಬಗ್ಗೆ ಭೋಪಾಲ್‌ನಲ್ಲಿರುವ ಏಮ್ಸ್‌ನ ಹಿರಿಯ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.

ಮಾರ್ಚ್‌ 20ರ ಬಳಿಕ ಆಗಸ್ಟ್ 29ರ ವರೆಗೆ ಮಧ್ಯ ಪ್ರದೇಶದಲ್ಲಿ 60,875 ಕೊರೊನಾ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 47,282 ಜುಲೈ ಮತ್ತು ಆಗಸ್ಟ್‌ನಲ್ಲಿ ದೃಢಪಟ್ಟಿವೆ ಎಂದು ಸರ್ಕಾರದ ಅಂಕಿಅಂಶಗಳಿಂದ ತಿಳಿದುಬಂದಿದೆ.

ADVERTISEMENT

ರಾಜ್ಯದಲ್ಲಿ ಕೊರೊನಾದಿಂದಾಗಿ ಈವರೆಗೆ 1,345 ಸಾವು ಸಂಭವಿಸಿದೆ. ಈ ಪೈಕಿ 773 ಮಂದಿ ಕಳೆದೆರಡು ತಿಂಗಳಲ್ಲಿ ಮೃತಪಟ್ಟಿದ್ದಾರೆ. ಇದು ಶೇ 57ರಷ್ಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.