ADVERTISEMENT

ಪಾಲ್ಘರ್‌ | ದೋಣಿಗೆ ಸರಕು ಸಾಗಣೆ ಹಡಗು ಡಿಕ್ಕಿ; 15 ನಾವಿಕರ ರಕ್ಷಣೆ

17 ಗಂಟೆಗಳ ಕಾರ್ಯಾಚರಣೆ;

ಪಿಟಿಐ
Published 16 ಆಗಸ್ಟ್ 2025, 15:39 IST
Last Updated 16 ಆಗಸ್ಟ್ 2025, 15:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಾಲ್ಘರ್‌: ಮಹಾರಾಷ್ಟ್ರದ ಪಾಲ್ಘರ್‌ ಕರಾವಳಿ ಪ್ರದೇಶದಲ್ಲಿ ಆಗಸ್ಟ್ 14ರ ರಾತ್ರಿ ಮೀನುಗಾರಿಕಾ ದೋಣಿಗೆ ಸರಕು ಸಾಗಣೆ ಹಡಗು ಡಿಕ್ಕಿ ಹೊಡೆದಿದೆ.

ಕರಾವಳಿ ತೀರದಿಂದ ಮೂರು ನಾಟಿಕಲ್‌ ಮೈಲಿ ದೂರದಲ್ಲಿ ಈ ಅವಘಡ ಸಂಭವಿಸಿದೆ. ‘ಶ್ರೀ ಸಾಯಿ’ ದೋಣಿಯಲ್ಲಿದ್ದ ನಾಲ್ವರು ನಾವಿಕರು ಸಮುದ್ರಕ್ಕೆ ಬಿದ್ದಿದ್ದು, ಈಜುತ್ತಾ ದಡ ಸೇರಿದ್ದಾರೆ.

‘ಜೈ ಸಾಯಿ ಪ್ರಿಯ’ ಹಾಗೂ ‘ಜೈ ಸಾಯಿ ರಾಮ್‌’ ದೋಣಿಗಳು ಸರಿಯಾದ ಸಮಯಕ್ಕೆ ಸಹಾಯಕ್ಕೆ ಧಾವಿಸಿದ್ದರಿಂದ 15 ನಾವಿಕರ ಜೀವಗಳು ಉಳಿದಿದ್ದು, ಸಂಭವನೀಯ ಅನಾಹುತ ತಪ್ಪಿದೆ.

ADVERTISEMENT

ಸಮುದ್ರದಲ್ಲಿ ಶುಕ್ರವಾರ ಸುಮಾರು 17 ಗಂಟೆಗಳ ಕಾರ್ಯಾಚರಣೆ ಬಳಿಕ ಅಪಘಾತಕ್ಕೀಡಾದ ದೋಣಿಯನ್ನು ದಡಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.