ADVERTISEMENT

ದೇಶದಲ್ಲಿ ಬ್ರಿಟನ್‌, ದಕ್ಷಿಣ ಆಫ್ರಿಕಾ, ಬ್ರೆಜಿಲ್‌ ಮಾದರಿಯ 400 ಕೋವಿಡ್‌ ಪ್ರಕರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಮಾರ್ಚ್ 2021, 13:57 IST
Last Updated 18 ಮಾರ್ಚ್ 2021, 13:57 IST
ಪ್ರಾತಿನಿಧಿಕ ಚಿತ್ರ  (ಎಎಫ್‌ಪಿ)
ಪ್ರಾತಿನಿಧಿಕ ಚಿತ್ರ (ಎಎಫ್‌ಪಿ)    

ನವದೆಹಲಿ: ಬ್ರಿಟನ್‌, ದಕ್ಷಿಣ ಆಫ್ರಿಕಾ, ಬ್ರೆಜಿಲ್‌ ಮಾದರಿಯ ಕೋವಿಡ್‌ ಪ್ರಕರಣಗಳು ಭಾರತದಲ್ಲಿ 400ಕ್ಕೆ ಏರಿಕೆಯಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಗುರುವಾರ ದೇಶದಲ್ಲಿ ಒಟ್ಟು 35,871 ಪ್ರಕರಣಗಳು ವರದಿಯಾದವು. ನೂರು ದಿನಗಳಲ್ಲಿ ವರದಿಯಾದ ದಾಖಲೆಯ ಸಂಖ್ಯೆಯ ಪ್ರಕರಣಗಳಿವು. ಇದರೊಂದಿಗೆ ದೇಶದ ಒಟ್ಟಾರೆ ಸೋಂಕಿನ ಸಂಖ್ಯೆ 1,14,74,605 ಏರಿಕೆಯಾಗಿದೆ.

ಸತತ ಎಂಟು ದಿನಗಳಲ್ಲಿ ಕೋವಿಡ್‌ ಪ್ರಕರಣಗಳು ಏರುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಗುರುವಾರದ ಹೊತ್ತಿಗೆ 2,52,364ಕ್ಕೆ ತಲುಪಿದೆ. ಒಟ್ಟಾರೆ ಸೋಂಕು ಪ್ರಕರಣಗಳಲ್ಲಿ ಇದು ಶೇ. 2.20ರಷ್ಟು ಆಗಿದೆ. ಇನ್ನು ಗುಣಮುಖರಾಗುವವರ ಪ್ರಮಾಣ ಶೇ. 96.41 ರಷ್ಟು ಇದೆ ಎಂದು ಆರೋಗ್ಯ ಇಲಾಖೆಯ ವೆಬ್‌ಸೈಟ್‌ನಿಂದ ಗೊತ್ತಾಗಿದೆ.

ADVERTISEMENT

ಇನ್ನು ಗುರುವಾರ ವರದಿಯಾದ 172 ಸಾವುಗಳೊಂದಿಗೆ ದೇಶದಲ್ಲಿ ಕೋವಿಡ್‌ನಿಂದ ಸತ್ತವರ ಸಂಖ್ಯೆ 1,59,216 ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.