ADVERTISEMENT

ಲಂಚ ಪ್ರಕರಣ: ಇ.ಡಿ ಅಧಿಕಾರಿಗಳ ಬಂಧನ

ಪಿಟಿಐ
Published 2 ಜುಲೈ 2021, 16:36 IST
Last Updated 2 ಜುಲೈ 2021, 16:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಗುಜರಾತ್‌ನಲ್ಲಿ ಭಾರತೀಯ ಕಂದಾಯ ಸೇವೆ (ಐಆರ್‌ಎಸ್‌) ಉಪ ನಿರ್ದೇಶಕ ಸೇರಿ ಜಾರಿ ನಿರ್ದೇಶನಾಲಯದ (ಇ.ಡಿ) ಇಬ್ಬರು ಅಧಿಕಾರಿಗಳನ್ನು ಲಂಚ ಪಡೆಯುತ್ತಿದ್ದಾಗ ಸಿಬಿಐಶುಕ್ರವಾರ ಬಂಧಿಸಿದೆ.

2013ರ ಬ್ಯಾಚ್‌ನ ಐಆರ್‌ಎಸ್‌ ಅಧಿಕಾರಿ ಮತ್ತು ಇ.ಡಿ ಸಹಾಯಕ ನಿರ್ದೇಶಕ ಕಂಪನಿಯೊಂದರಿಂದ ₹75 ಲಕ್ಷ ಲಂಚ ಕೇಳಿದ್ದರು. ಮೊದಲ ಕಂತು ₹5 ಲಕ್ಷ ಪಡೆಯುವಾಗ ಸಿಬಿಐ ಬೀಸಿದ ಬಲೆಗೆ ಬಿದ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT