ADVERTISEMENT

ಸಿಧು ಹತ್ಯೆ: ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮಗಳ ಬಂಧನ

ಪಿಟಿಐ
Published 15 ಜೂನ್ 2022, 19:12 IST
Last Updated 15 ಜೂನ್ 2022, 19:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಆರು ವರ್ಷಗಳ ಹಿಂದೆ ಚಂಡೀಗಡದಲ್ಲಿ ರಾಷ್ಟ್ರ ಮಟ್ಟದ ಶೂಟರ್ ಸುಖಮನ್‌ಪ್ರೀತ್ ಸಿಂಗ್ ಆಲಿಯಾಸ್‌ ಸಿಪ್ಪಿ ಸಿಧುಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಸಬೀನಾ ಸಿಂಗ್ ಅವರ ಪುತ್ರಿ ಕಲ್ಯಾಣಿ ಸಿಂಗ್ ಅವರನ್ನು ಸಿಬಿಐ ಬುಧವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.

‘ಸಿಧು ಅವರೊಂದಿಗಿನ ಸಂಬಂಧವು ಹದಗೆಟ್ಟಿದೆ ಎಂದು ಸೂಚಿಸುವ ಸಾಕ್ಷ್ಯಗಳನ್ನು ಕಲೆಹಾಕಿದ ನಂತರ ಸಿಬಿಐ ಕಲ್ಯಾಣಿ ಸಿಂಗ್ ಅವರನ್ನು ವಿಚಾರಣೆಗಾಗಿ ತನ್ನ ಕಚೇರಿಗೆ ಕರೆದಿತ್ತು.ವಿಚಾರಣೆಯ ಸಮಯದಲ್ಲಿಕಲ್ಯಾಣಿ ಅವರು ಅನುಮಾನಾಸ್ಪದ ಪ್ರತಿಕ್ರಿಯೆಗಳನ್ನು ನೀಡಿದ್ದರಿಂದ ಸಿಬಿಐ ಅವರನ್ನು ಬಂಧಿಸಿತು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT