ADVERTISEMENT

20 ಸಾವಿರ ಲಂಚ: ರೈಲ್ವೆ ಎಂಜಿನಿಯರ್‌ ಬಂಧನ

ಪಿಟಿಐ
Published 18 ಏಪ್ರಿಲ್ 2024, 14:22 IST
Last Updated 18 ಏಪ್ರಿಲ್ 2024, 14:22 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಅಧಿಕಾರಿಯೊಬ್ಬರನ್ನು ಹಾಲಿ ಹುದ್ದೆಯಿಂದ ಬಿಡುಗಡೆಗೊಳಿಸಲು ₹20,000 ಲಂಚ ಪಡೆದ ಆರೋಪದ ಮೇಲೆ ವಾರಾಣಸಿಯಲ್ಲಿ ರೈಲ್ವೆಯ ಹಿರಿಯ ಸೆಕ್ಷನ್‌ ಎಂಜಿನಿಯರ್‌ ಅವರನ್ನು ಸಿಬಿಐ ಬಂಧಿಸಿದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ. 

ಈಶಾನ್ಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿರುವ ಬಂಧಿತ ಆರೋಪಿ ಸಂಜಯ್‌ ಕುಮಾರ್‌ ಅಧಿಕಾರಿಯೊಬ್ಬರನ್ನು ಪ್ರಸ್ತುತ ಹುದ್ದೆಯಿಂದ ಬಿಡುಗಡೆಗೊಳಿಸಲು ₹50,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಕುಮಾರ್‌ ವಿರುದ್ಧ ಅಧಿಕಾರಿ ಕೇಂದ್ರೀಯ ತನಿಖಾ ದಳಕ್ಕೆ ( ಸಿಬಿಐ) ದೂರು ನೀಡಿದ್ದರು. 

ADVERTISEMENT

ಬಳಿಕ ಎಫ್‌ಐಆರ್‌ ದಾಖಲಿಸಿದ ಸಿಬಿಐ, ₹20,000 ಲಂಚ ಪಡೆಯುವಾಗ ಅಧಿಕಾರಿಯನ್ನು ಬಂಧಿಸಿದೆ. ಅಲ್ಲದೆ ಆರೋಪಿಯ ನಿವಾಸಗಳ ಮೇಲೆ ದಾಳಿ ನಡೆಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.