ADVERTISEMENT

ಎಸ್‌ಬಿಐಗೆ ₹338.52 ಕೋಟಿ ವಂಚನೆ: ಇಡಿಎಎಲ್‌ ವಿರುದ್ಧ ಸಿಬಿಐ ಪ್ರಕರಣ

ಪಿಟಿಐ
Published 14 ಸೆಪ್ಟೆಂಬರ್ 2020, 16:36 IST
Last Updated 14 ಸೆಪ್ಟೆಂಬರ್ 2020, 16:36 IST
ಸಿಬಿಐ
ಸಿಬಿಐ   

ನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ಗೆ (ಎಸ್‌ಬಿಐ) ₹338.52 ಕೋಟಿ ನಷ್ಟ ಉಂಟು ಮಾಡಿದ ಆರೋಪದಡಿ ಮುಂಬೈ ಮೂಲದ ಎಸ್ಸ್ ಡೀ ಅಲ್ಯುಮೀನಿಯಂ ಲಿ.(ಇಡಿಎಎಲ್‌) ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.

ಎಫ್‌ಐಆರ್‌ ದಾಖಲಿಸಿದ ಬಳಿಕ, ಕಂಪನಿಯ ಕಚೇರಿ ಹಾಗೂ ಅದರ ಮುಖ್ಯಸ್ಥರು, ನಿರ್ದೇಶಕರ ಮನೆ, ಕಚೇರಿಗಳಲ್ಲಿ ಸಿಬಿಐ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಎಸ್‌ಬಿಐನಿಂದ ಸಾಲ ಪಡೆಯಲು ಕಂಪನಿಯ ನಿರ್ದೇಶಕರು ನಕಲಿ ದಾಖಲೆ ಸಲ್ಲಿಸಿದ್ದರು ಎಂದು ಸಿಬಿಐ ಆರೋಪಿಸಿದೆ.

‘ಪಡೆದ ಸಾಲವನ್ನು ಇತರೆ ಉದ್ದೇಶಗಳಿಗೆ ಆರೋಪಿಗಳು ಬಳಸಿಕೊಂಡಿದ್ದರು. ಇದರಿಂದಾಗಿ ಬ್ಯಾಂಕ್‌ಗೆ ನಷ್ಟು ಉಂಟಾಗಿದೆ’ ಎಂದು ಸಿಬಿಐ ವಕ್ತಾರ ಆರ್‌.ಕೆ.ಗೌರ್‌ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.