ADVERTISEMENT

ಮಾಜಿ ಸಚಿವರ ಕುಟುಂಬ ಶಿಕ್ಷಣ ಸಂಸ್ಥೆಯ ವಿರುದ್ಧ ಭ್ರಷ್ಟಾಚಾರ ಪ್ರಕರಣ

ಪಿಟಿಐ
Published 15 ಸೆಪ್ಟೆಂಬರ್ 2020, 8:31 IST
Last Updated 15 ಸೆಪ್ಟೆಂಬರ್ 2020, 8:31 IST
ಸಿಬಿಐ
ಸಿಬಿಐ   

ಜಮ್ಮು: ನಂಬಿಕೆ ದ್ರೋಹ ಮತ್ತು ಭ್ರಷ್ಟಾಚಾರ ಆರೋಪದಡಿ ಜಮ್ಮು ಮತ್ತು ಕಾಶ್ಮೀರದಮಾಜಿ ಸಚಿವ ಲಾಲ್‌ಸಿಂಗ್ ಕುಟುಂಬದವರು ಸದಸ್ಯರಾಗಿರುವ ಕಥುವಾ ಮೂಲದ ಶಿಕ್ಷಣ ಸಂಸ್ಥೆಯ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

ಮಾಜಿ ಸಚಿವರ ಕುಟುಂಬದ ಸದಸ್ಯರಿರುವ ಆರ್‌ಬಿ ಶಿಕ್ಷಣ ಸಂಸ್ಥೆಯ ವಿರುದ್ಧ ಭ್ರಷ್ಟಚಾರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಂಸ್ಥೆಯ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಲಾಲ್‌ಸಿಂಗ್‌ ಪತ್ನಿ ಮತ್ತು ಅವರ ಮಗ ಸೇರಿದಂತೆ ಇತರೆ ಸರ್ಕಾರಿ ಅಧಿಕಾರಿಗಳಹೆಸರಿದೆ. ಅಲ್ಲದೆ ಹಗರಣ ನಡೆದ ವೇಳೆಯಲ್ಲಿ ಅಧಿಕಾರದಲಿದ್ದ ಕಥುವಾ ನಗರದ ಉಪ ಆಯುಕ್ತರು ಹೆಸರೂ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಈ ಪ್ರಕರಣದ ಸಂಬಂಧ ಸಿಬಿಐ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಜಮ್ಮುವಿನ ಮೂರು ಮತ್ತು ಕಠುವಾ ಜಿಲ್ಲೆಯ 9 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.