ನವದೆಹಲಿ: ಕೇಂದ್ರೀಯ ತನಿಖಾ ದಳವು (ಸಿಬಿಐ) 12 ಕಡೆಗಳಲ್ಲಿ ಶೋಧ ನಡೆಸಿ ‘ಡಿಜಿಟಲ್ ಅರೆಸ್ಟ್’ ವಂಚನೆ ನಡೆಸುತ್ತಿದ್ದ ಜಾಲದ ನಾಲ್ಕು ಜನರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು.
ಶೋಧ ಕಾರ್ಯಾಚರಣೆಯನ್ನು ‘ಆಪರೇಷನ್ ಚಕ್ರ–ವಿ’ ಎಂದು ಕರೆದಿರುವ ಅವರು, ಡಿಜಿಟಲ್ ಅರೆಸ್ಟ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ ಇತ್ತೀಚೆಗೆ ಉತ್ತರ ಪ್ರದೇಶದ ಸಂಭಲ್ ಮತ್ತು ಮೊರಾದಾಬಾದ್, ಪಶ್ಚಿಮ ಬಂಗಾಳದ ಕೃಷ್ಣಾನಗರ, ಮುಂಬೈ, ಜೈಪುರ ಸೇರಿದಂತೆ 12 ಕಡೆಗಳಲ್ಲಿ ಶೋಧ ನಡೆಸಿತ್ತು. ಈ ಸಂದರ್ಭದಲ್ಲಿ ಡೆಬಿಟ್ ಕಾರ್ಡ್, ಚೆಕ್‌ಬುಕ್, ಡಿಜಿಟಲ್ ಸಾಧನ/ಸಾಕ್ಷ್ಯಗಳನ್ನು ಸ್ವಾಧೀನಕ್ಕೆ ಪಡೆದಿತ್ತು ಎಂದು ತಿಳಿಸಿದರು.
ಬಂಧಿತರು 42 ಕಂತುಗಳ ಮೂಲಕ ₹7.67 ಕೋಟಿ ಸುಲಿಗೆ ಮಾಡಿದ್ದರು. ಆರೋಪಿಗಳು ವಿವಿಧ ತನಿಖಾ ಸಂಸ್ಥೆ ಅಧಿಕಾರಗಳ ಸೋಗಿನಲ್ಲಿ ಸಂತ್ರಸ್ತರನ್ನು ಸಂಪರ್ಕಿಸಿ ಮೂರು ತಿಂಗಳು ಡಿಜಿಟಲ್ ಅರೆಸ್ಟ್ ಮಾಡಿದ್ದರು ಎಂದು ಸಿಬಿಐ ಆರೋಪಿಸಿದೆ.
ಬಂಧಿತರನ್ನು ಐದು ದಿನ ಪೊಲೀಸ್ ವಶಕ್ಕೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.