ADVERTISEMENT

ಕೋವಿಡ್‌–19 ನಕಲಿ ಪರೀಕ್ಷಾ ಕಿಟ್‌: ರಾಜ್ಯಗಳ ಪೊಲೀಸರಿಗೆ ಸಿಬಿಐ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 5 ಮೇ 2020, 12:18 IST
Last Updated 5 ಮೇ 2020, 12:18 IST
   

ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಕಲಿ ಕೋವಿಡ್‌–19 ಪರೀಕ್ಷಾ ಕಿಟ್‌ಗಳನ್ನು ಮಾರಾಟ ಮಾಡಲಾಗುತ್ತಿರುವ ಕುರಿತು ಎಲ್ಲ ರಾಜ್ಯಗಳ ಪೊಲೀಸ್ ಇಲಾಖೆಗಳಿಗೆ ಸಿಬಿಐ ಎಚ್ಚರಿಸಿದೆ.

ಇಂಟರ್‌ಪೋಲ್‌ ನೀಡಿದ ಮಾಹಿತಿ ಅನ್ವಯ ಸಿಬಿಐ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ಹೇಳಿವೆ.

‘ಒಟ್ಟು 194 ಸದಸ್ಯ ರಾಷ್ಟ್ರಗಳಿಗೆ ಇಂಟರ್‌ಪೋಲ್‌ ಈ ಎಚ್ಚರಿಕೆಯ ಸಂದೇಶ ನೀಡಿದೆ. ಭಾರತ ಮೂಲದ ಕಂಪನಿ ಅಥವಾ ವಿತರಕರ
ಕುರಿತು ಮಾಹಿತಿ ಇಲ್ಲ’ ಎಂದು ಇವೇ ಮೂಲಗಳು ತಿಳಿಸಿವೆ.

ADVERTISEMENT

ವಿದೇಶಿ ಕೋವಿಡ್‌–19 ಪರೀಕ್ಷಾ ಕಿಟ್‌ಗಳ ಮೇಲೆ ಭಾರತ ಹೆಚ್ಚು ಅವಲಂಭಿತವಾಗಿದೆ. ದೇಶದಲ್ಲಿ ಇಲ್ಲಿಯವರೆಗೂ 46 ಸಾವಿರ ಜನರು
ಕೊರೊನಾ ವೈರಸ್‌ ಸೋಂಕಿಗೆ ತುತ್ತಾಗಿದ್ದಾರೆ. 1568 ಜನರು ಬಲಿಯಾಗಿದ್ದಾರೆ.

ಜಾಗತಿಕವಾಗಿ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದಂತೆ ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ನಕಲಿ ಔಷಧಿ, ಪರೀಕ್ಷಾ ಕಿಟ್‌ ಹಾಗೂ ವೈದ್ಯಕೀಯ ಸಾಮಗ್ರಿಗಳನ್ನು ಪೂರೈಸುವುದಾಗಿ ಹೇಳಿ ಆನ್‌ಲೈನ್‌ ಮೂಲಕ ಕೆಲವು ನಕಲಿ ಕಂಪನಿಗಳುಖಾಸಗಿ ಆಸ್ಪತ್ರೆಗಳಿಗೆ ವಂಚನೆ ಮಾಡಿರುವ ಪ್ರಕರಣಗಳನ್ನು ಇಂಟರ್‌ಪೋಲ್‌ ಗಮನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.