ADVERTISEMENT

ಗೋವುಗಳ ಕಳ್ಳಸಾಗಣೆ ಪ್ರಕರಣ: ಆರೋಪಿ ಮಿಶ್ರಾ ಸಹೋದರನ ವಿಚಾರಣೆ

ಪಿಟಿಐ
Published 20 ಜನವರಿ 2021, 15:07 IST
Last Updated 20 ಜನವರಿ 2021, 15:07 IST
ಸಿಬಿಐ
ಸಿಬಿಐ   

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎನ್ನಲಾದ ಗೋವುಗಳ ಕಳ್ಳಸಾಗಣೆ ಪ್ರಕರಣದ ಆರೋಪಿ ವಿನಯ್ ಮಿಶ್ರಾ ಅವರ ಒಬ್ಬ ಸಹೋದರನನ್ನು ಸಿಬಿಐ ಅಧಿಕಾರಿಗಳು ಬುಧವಾರ ವಿಚಾರಣೆಗೆ ಒಳಪಡಿಸಿದರು.

ವಿಚಾರಣೆಗೆ ಒಳಪಟ್ಟ ವ್ಯಕ್ತಿ ತೃಣಮೂಲ ಕಾಂಗ್ರೆಸ್‌ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದು ಸಿಬಿಐ ಮೂಲಗಳು ಹೇಳಿವೆ.

ಆರೋಪಿ ಮಿಶ್ರಾ ಉದ್ಯಮಿಯಾಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರ ಸಂಬಂಧಿ ಅಭಿಷೇಕ್‌ ಬ್ಯಾನರ್ಜಿ ಆಪ್ತ ಎಂದು ಹೇಳಲಾಗಿದೆ.

ADVERTISEMENT

ಈ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಅಧಿಕಾರಿಗಳು ಆರೋಪಿ ವಿನಯ್‌ ಮಿಶ್ರಾಗೆ ಸೇರಿದ ಕಚೇರಿ, ಮನೆಗಳಲ್ಲಿ ಡಿ. 31ರಂದು ಶೋಧ ಕಾರ್ಯ ನಡೆಸಿದ್ದರು. ಮಿಶ್ರಾ ತಲೆ ಮರೆಸಿಕೊಂಡಿದ್ದು, ಅವರ ವಿರುದ್ಧ ಸಿಬಿಐ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದೆ.

ಈ ಪ್ರಕರಣದ ಪ್ರಮುಖ ಸೂತ್ರಧಾರ ಎನ್ನಲಾದ ಇನಾಮುಲ್‌ ಹಕ್‌ ಎಂಬಾತನನ್ನು ಸಿಬಿಐ ಅಧಿಕಾರಿಗಳು ನವೆಂಬರ್‌ 6ರಂದು ಬಂಧಿಸಿದ್ದಾರೆ.

ಇತರ ಆರೋಪಿಗಳಾದ ಅನಾರುಲ್‌ ಎಸ್‌.ಕೆ, ಮೊಹಮ್ಮದ್‌ ಗುಲಾಂ ಮುಸ್ತಫಾಗೆ ನೆರವು ನೀಡಿದ ಆರೋಪದ ಮೇಲೆ 36ನೇ ಬಿಎಸ್‌ಎಫ್‌ ಬೆಟಾಲಿಯನ್‌ನ ಮಾಜಿ ಕಮಾಂಡೆಂಟ್‌ ಸತೀಶ್‌ಕುಮಾರ್‌ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.