ADVERTISEMENT

ಸಿಬಿಐ ದಾಳಿ ರಾಜಕೀಯ ಪ್ರೇರಿತ: ಛತ್ತೀಸಗಢ ಮಾಜಿ ಸಿಎಂ ಭೂಪೇಶ್ ಬಘೇಲ್

ಪಿಟಿಐ
Published 27 ಮಾರ್ಚ್ 2025, 4:09 IST
Last Updated 27 ಮಾರ್ಚ್ 2025, 4:09 IST
ಭೂಪೇಶ್ ಬಘೇಲ್
ಭೂಪೇಶ್ ಬಘೇಲ್   

ರಾಯಪುರ: ರಾಜ್ಯಕ್ಕೆ ಮಾರ್ಚ್‌ 30ರಂದು ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಕ್ಕೆ ವಿಷಯ ಸೃಷ್ಟಿಸಲು ತಮ್ಮ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದೆ ಎಂದು ಛತ್ತೀಸಗಢ ಮಾಜಿ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಆರೋಪಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿಬಿಐ ದಾಳಿ ರಾಜಕೀಯ ಪ್ರೇರಿತವಾಗಿವೆ. ಮಾರ್ಚ್‌ 30ರಂದು ರಾಜ್ಯಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಕ್ಕೆ ವಿಷಯ ಸೃಷ್ಟಿಸುವ ಸಲುವಾಗಿ ಈ ದಾಳಿ ನಡೆಸಲಾಗಿದೆ. ಬೇರೆ ಯಾವುದೇ ಕಾರಣವಿಲ್ಲ’ ಎಂದು ಹೇಳಿದ್ದಾರೆ.

ಭಿಲಾಯಿಯಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಲು ಸಿಬಿಐ ‘ಸರ್ಚ್‌ ವಾರಂಟ್‌’ ಹೊಂದಿತ್ತು. ಆದರೆ, ರಾಯಪುರದಲ್ಲಿರುವ ನಿವಾಸದ ಮೇಲೆ ದಾಳಿ ನಡೆದ ಬಗ್ಗೆ ನನಗೆ ತಿಳಿದಿರಲಿಲ್ಲ. ನಾನು ಮನೆಯಿಂದ ಹೊರಬಂದ ಬಳಿಕ ವಿಷಯ ತಿಳಿಯಿತು. ಅವರು ಅಲ್ಲಿ ಏನೇ ಇಟ್ಟಿದ್ದರೂ, ನಾನು ಅದಕ್ಕೆ ಜವಾಬ್ದಾರನಾಗಿರುವುದಿಲ್ಲ. ಏಕೆಂದರೆ, ದಾಳಿಯ ಸಂದರ್ಭದಲ್ಲಿ ನಾನು ಅಥವಾ ನನ್ನ ಕುಟುಂಬ ಸದಸ್ಯರು ಅಲ್ಲಿರಲಿಲ್ಲ. ಇದು ಸಿಬಿಐ ಪಿತೂರಿಯಾಗಿದೆ’ ಎಂದು ಬಘೇಲ್‌ ಆರೋಪಿಸಿದ್ದಾರೆ.

ADVERTISEMENT

ರಾಯಪುರ ಮತ್ತು ಭಿಲಾಯಿಯಲ್ಲಿರುವ ಬಘೇಲ್‌ ಅವರ ನಿವಾಸದ ಮೇಲೆ ನಿನ್ನೆ (ಬುಧವಾರ) ಸಿಬಿಐ ದಾಳಿ ನಡೆಸಿತ್ತು.

ಮಹಾದೇವ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ ಹಗರಣಕ್ಕೆ ಸಂಬಂಧಿಸಿದಂತೆ ರಾಯಪುರ ಮತ್ತು ಭಿಲಾಯಿಯಲ್ಲಿರುವ ಬಘೇಲ್‌ ಅವರ ನಿವಾಸ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳು ಮತ್ತು ಆಪ್ತ ಸಹಚರರ ಮನೆಗಳ ಮೇಲೂ ಸಿಬಿಐ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.