ADVERTISEMENT

ಸಂದೇಶ್‌ಖಾಲಿ: ಶಹಜಹಾನ್‌ ಶೇಖ್‌ ಮನೆ, ಕಚೇರಿಯಲ್ಲಿ ಸಿಬಿಐ ಶೋಧ

ಪಿಟಿಐ
Published 8 ಮಾರ್ಚ್ 2024, 14:18 IST
Last Updated 8 ಮಾರ್ಚ್ 2024, 14:18 IST
<div class="paragraphs"><p>ಸಿಬಿಐ</p></div>

ಸಿಬಿಐ

   

ಕೋಲ್ಕತ್ತ: ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿ, ಟಿಎಂಸಿಯಿಂದ ಅಮಾನತುಗೊಂಡಿರುವ ಮುಖಂಡ ಶಹಜಹಾನ್‌ ಶೇಖ್‌ ಅವರ ಸಂದೇಶ್‌ಖಾಲಿಯಲ್ಲಿರುವ ಮನೆ ಮತ್ತು ಕಚೇರಿಯಲ್ಲಿ ಸಿಬಿಐ ಅಧಿಕಾರಿಗಳು ಶುಕ್ರವಾರ ಶೋಧ ಕಾರ್ಯ ನಡೆಸಿದ್ದಾರೆ.

ದಾಳಿಗೆ ಸಂಬಂಧಿಸಿರುವ ಸಾಕ್ಷ್ಯ ಸಂಗ್ರಹಿಸಲು ಸಿಬಿಐ ತಂಡವು ಸರ್ಬೇರಿಯಾದ ಅಕುಂಚಿಪಾರಾ ಪ್ರದೇಶಕ್ಕೂ ಭೇಟಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದರು.

ADVERTISEMENT

ಶೇಖ್‌ ಅವರ ಮನೆಯಲ್ಲಿ ಬೀಗ ಹಾಕಿ ಮೊಹರು ಮಾಡಿದ್ದ ಕೋಣೆಗಳನ್ನು ತೆರೆದು ವಿಡಿಯೊ ಚಿತ್ರೀಕರಿಸಲಾಗಿದೆ ಎಂದು ವಿವರಿಸಿದರು. ಶೋಧ ಕಾರ್ಯಾಚರಣೆ ವೇಳೆ ಭದ್ರತೆಗಾಗಿ ಕೇಂದ್ರೀಯ ಪಡೆಗಳನ್ನು ನಿಯೋಜಿಸಲಾಗಿತ್ತು.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಜನವರಿ 5ರಂದು ಇ.ಡಿ. ಅಧಿಕಾರಿಗಳ ಮೇಲೆ ಗುಂಪೊಂದು ದಾಳಿ ನಡೆಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಶೇಖ್‌ ಅವರನ್ನು ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.