ನವದೆಹಲಿ : ಯಮುನಾ ಎಕ್ಸ್‌ಪ್ರೆಸ್ ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (ಯೇಡಾ) ಭೂಹಗರಣದ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದ್ದು, ಪ್ರಾಧಿಕಾರದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಪಿ.ಸಿ. ಗುಪ್ತಾ ಮತ್ತು ಇತರ 20 ಮಂದಿ ವಿರುದ್ಧ ಬುಧವಾರ ಎಫ್ಆರ್‌ಐ ದಾಖಲಿಸಿದೆ.
ಗ್ರೇಟರ್ ನೋಯ್ಡಾವನ್ನು ಆಗ್ರಾದೊಂದಿಗೆ ಸಂಪರ್ಕಿಸುವ 165 ಕಿ.ಮೀ. ಉದ್ದದ ಯುಮನಾ ಎಕ್ಸ್‌ಪ್ರೆಸ್ ಹೆದ್ದಾರಿ ಕಾಮಗಾರಿಗಾಗಿ ಮಥುರಾ ಬಳಿಯ 7 ಹಳ್ಳಿಗಳ ವ್ಯಾಪ್ತಿಯಲ್ಲಿ 57.15 ಹೆಕ್ಟೇರ್ ಖರೀದಿಗೆ ಪ್ರಾಧಿಕಾರ ₹ 85.49 ಕೋಟಿಗೆ ಒದಗಿಸಿತ್ತು. ಆದರೆ, ಗುಪ್ತಾ ಅವರು ತಮ್ಮ ಸಂಬಂಧಿಕರೊಂದಿಗೆ ಕ್ರಮಿನಲ್ ಸಂಚು ಹೂಡಿ, ಈ ಜಮೀನನ್ನು ಖರೀದಿಸಿ, ಪ್ರಾಧಿಕಾರಕ್ಕೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರು. ಇದರಿಂದ ಬೊಕ್ಕಸಕ್ಕೆ ₹ 126 ಕೋಟಿ ನಷ್ಟವುಂಟಾಗಿತ್ತು ಎಂದು ಪೊಲೀಸರು ಎಫ್ಐಆರ್‌ನಲ್ಲಿ ಆರೋಪಿಸಿದ್ದಾರೆ.
2018ರ ಜುಲೈ 24ರಂದು ಪ್ರಾಧಿಕಾರದಲ್ಲಿ ನಡೆದ ಅಕ್ರಮಗಳ ಕುರಿತು ಸಿಬಿಐ ತನಿಖೆ ನಡೆಸುವಂತೆ ಉತ್ತರ ಪ್ರದೇಶ ಸರ್ಕಾರ ಶಿಫಾರಸು ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.