ADVERTISEMENT

ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಪ್ರಕಟ, 13 ವಿದ್ಯಾರ್ಥಿಗಳಿಗೆ ಪ್ರಥಮ ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 6 ಮೇ 2019, 11:12 IST
Last Updated 6 ಮೇ 2019, 11:12 IST
ಸಾಂಧರ್ಬಿಕ ಚಿತ್ರ
ಸಾಂಧರ್ಬಿಕ ಚಿತ್ರ   

ನವದೆಹಲಿ: ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, cbseresults.nic.in ಮತ್ತು cbse.nic.in ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಿದೆ.

13 ವಿದ್ಯಾರ್ಥಿಗಳು 499 ಅಂಕಗಳನ್ನು ಪಡೆದು ಟಾಪರ್‌ಗಳಾಗಿದ್ದಾರೆ.

ಪ್ರಥಮ ಸ್ಥಾನಗಳಿಸಿದ 13 ವಿದ್ಯಾರ್ಥಿಗಳಲ್ಲಿ 7 ವಿದ್ಯಾರ್ಥಿಗಳು ಡೆಹ್ರಾಡೂನ್‌ ವಲಯದವರಾಗಿದ್ದು, ಇನ್ನುಳಿದವರು ಪಂಚಕುಲಾ, ಅಜ್ಮೇರ್, ಪ್ರಯಾಗ್‌ರಾಜ್ ಮತ್ತು ತ್ರಿವೇಂಡ್ರಂ ವಲಯದವರಾಗಿದ್ದಾರೆ.

ADVERTISEMENT

2.2 ಲಕ್ಷ (2,25,143 ) ವಿದ್ಯಾರ್ಥಿಗಳುಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.

ಕೇಂದ್ರೀಯ ವಿದ್ಯಾಲಯ ಉನ್ನತ ಸಾಧನೆ

ಶಾಲೆಗಳ ಪೈಕಿ ಕೇಂದ್ರೀಯ ವಿದ್ಯಾಲಯ ಶೇ. 99.47, ಜವಾಹರ್ ನವೋದಯ ವಿದ್ಯಾಲಯ-ಶೇ.98.57 , ಸರ್ಕಾರಿ ಶಾಲೆ ಶೇ.71.91 ಫಲಿತಾಂಶ ಸಾಧನೆ ಮಾಡಿದೆ.

ಪ್ರದೇಶವಾರು ಫಲಿತಾಂಶ (ಶೇಕಡಾದಲ್ಲಿ)
ತ್ರಿವೇಂಡ್ರಂ- 99.85
ಚೆನ್ನೈ- 99
ದೆಹಲಿ- 80.97
ಅಜ್ಮೇರ್- 95.89
ಪಂಚಕುಲಾ- 93.72
ಪ್ರಯಾಗ್‌ರಾಜ್- 92.55
ಭುವನೇಶ್ವರ್- 92.32
ಪಟನಾ- 91.86
ಡೆಹ್ರಾಡೂನ್- 89.04
ಗುವಾಹಟಿ- 74.49

ವಿದ್ಯಾರ್ಥಿನಿಯರದ್ದೇ ಮೇಲುಗೈ

ಈ ಬಾರಿ 92.45% ವಿದ್ಯಾರ್ಥಿನಿಯರು ಮತ್ತು90.14% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ತೃತೀಯ ಲಿಂಗಿ ವಿಭಾಗದಲ್ಲಿ 94.74% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

25 ವಿದ್ಯಾರ್ಥಿಗಳಿಗೆ ಎರಡನೇ ರ‍್ಯಾಂಕ್, 59 ವಿದ್ಯಾರ್ಥಿಗಳಿಗೆ ಮೂರನೇ ರ‍್ಯಾಂಕ್
25 ವಿದ್ಯಾರ್ಥಿಗಳು 500 ಅಂಕಗಳಲ್ಲಿ 498 ಅಂಕಗಳನ್ನು ಗಳಿಸಿ ಎರಡನೇ ರ‍್ಯಾಂಕ್ ಪಡೆದಿದ್ದಾರೆ.59 ವಿದ್ಯಾರ್ಥಿಗಳು 497 ಅಂಕಗಳಿಸಿ ಮೂರನೇ ರ‍್ಯಾಂಕ್ ಪಡೆದಿದ್ದಾರೆ.

ಫೆಬ್ರುವರಿ 21ರಿಂದ ಮಾರ್ಚ್ 29ರವರೆಗೆ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ನಡೆದಿತ್ತು.ಈ ಬಾರಿ ಸುಮಾರು 18 ಲಕ್ಷ ವಿದ್ಯಾರ್ಥಿಗಳು 10ನೇ ತರಗತಿಪರೀಕ್ಷೆ ಬರೆದಿದ್ದರು.

ಕಳೆದ ಬಾರಿ ಒಟ್ಟಾರೆ ಫಲಿತಾಂಶ 86.7% ಆಗಿದ್ದು ಈ ಬಾರಿ 91.1% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಏತನ್ಮಧ್ಯೆ, 99.85% ಪರೀಕ್ಷಾ ಫಲಿತಾಂಶಗಳೊಂದಿಗೆ ತ್ರಿವೇಂಡ್ರಂ ವಲಯ ಅಗ್ರ ಸ್ಥಾನ ಗಿಟ್ಟಿಸಿಕೊಂಡಿದೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಮಗಳು ಶೇ. 82 ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದಾಳೆ ಎಂದು ಸ್ಮತಿ ಇರಾನಿ ಟ್ವೀಟ್ ಮಾಡಿದ್ದಾರೆ.

ಮೇ 2, 2019ರಂದು ಸಿಬಿಎಸ್‌ಇ 12ನೇ ತರಗತಿ ಪರೀಕ್ಷಾ ಫಲಿತಾಂಶ ಪ್ರಕಟಿಸಿತ್ತು. ಈ ಬಾರಿ 12 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು 12ನೇ ತರಗತಿ ಪರೀಕ್ಷೆ ಬರೆದಿದ್ದರು. ಶೇ.83,4 ಮಂದಿ ಪರೀಕ್ಷೆ ಪಾಸಾಗಿದ್ದರು.

10ನೇ ತರಗತಿ ಪರೀಕ್ಷೆಗಾಗಿ 18, 27, 472 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದರು.ಸಿಬಿಎಸ್‌ಇ ಪತ್ರಿಕಾ ಪ್ರಕಟಣೆಯ ಪ್ರಕಾರ ಭಾರತದಿಂದ ಹೊರಗಿರುವ 98 ಪರೀಕ್ಷಾ ಕೇಂದ್ರಗಳಲ್ಲಿ 40, 296 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ವೆಬ್‌ಸೈಟ್‌ನಲ್ಲಿ ಫಲಿತಾಂಶ ಪಡೆಯಲು ಹೀಗೆ ಮಾಡಿ
* cbseresults.nic.in ಅಥವಾ cbse.nic.inಗೆ ಭೇಟಿ ನೀಡಿ
* ಮುಖಪುಟದಲ್ಲಿ Class 10 Result 2019 ಕ್ಲಿಕ್ ಮಾಡಿ
* ನಿಮ್ಮ ರೋಲ್ ನಂಬರ್, ಜನ್ಮ ದಿನಾಂಕ, ಶಾಲೆಯ ಹೆಸರು, ಪರೀಕ್ಷಾ ಕೇಂದ್ರದ ಹೆಸರು ಮತ್ತು Admit ಕಾರ್ಡ್ ಸಂಖ್ಯೆ ನಮೂದಿಸಿ Submit ಬಟನ್ ಒತ್ತಿ.
* ನಿಮ್ಮ ಫಲಿತಾಂಶ ಡಿಸ್‌ಪ್ಲೇ ಆಗುತ್ತದೆ. ಡೌನ್‌ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.