ADVERTISEMENT

ಸಿಬಿಎಸ್‌ಇ ಪಠ್ಯದಲ್ಲಿ ಯೋಗ, ಕೃತಕ ಬುದ್ಧಿಮತ್ತೆ

ಕೇಂದ್ರಿಯ ಪ್ರೌಢಶಿಕ್ಷಣ ಮಂಡಳಿಯಿಂದ ನಿರ್ಧಾರ

ಪಿಟಿಐ
Published 24 ಮಾರ್ಚ್ 2019, 19:25 IST
Last Updated 24 ಮಾರ್ಚ್ 2019, 19:25 IST
ಯೋಗಾಭ್ಯಾಸ ನಿರತರು– ಸಂಗ್ರಹ ಚಿತ್ರ
ಯೋಗಾಭ್ಯಾಸ ನಿರತರು– ಸಂಗ್ರಹ ಚಿತ್ರ   

ನವದೆಹಲಿ: ‘ಮುಂದಿನ ಶೈಕ್ಷಣಿಕ ವರ್ಷದಿಂದ ಕೇಂದ್ರಿಯ ಪ್ರೌಢಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಕೃತಕ ಬುದ್ಧಿಮತ್ತೆ, ಶಿಶು ಕಾಳಜಿ ಶಿಕ್ಷಣ ಹಾಗೂ ಯೋಗ ವಿಷಯವನ್ನು ಶಾಲಾ ಪಠ್ಯದಲ್ಲಿ ಸೇರ್ಪಡೆಗೊಳಿಸಲು ನಿರ್ಧರಿಸಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಹೊಸತಾಗಿ ಮೂರು ವಿಷಯಗಳನ್ನು ಸೇರ್ಪಡೆಗೊಳಿಸಲು ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದು ಅವರು ತಿಳಿಸಿದರು.

‘2019–20ರಲ್ಲಿ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಐಚ್ಛಿಕ ವಿಷಯವಾಗಿ ಕೃತಕ ಬುದ್ಧಿಮತ್ತೆ ವಿಷಯವನ್ನು ಜಾರಿಗೊಳಿಸಲಿದೆ. ಇದರಿಂದ ಕಲಿಕೆಯಲ್ಲಿ ಹೊಸಪೀಳಿಗೆಯನ್ನು ಸಂವೇದನೆಗೊಳಿಸಲು ಸಹಕಾರಿಯಾಗಲಿದೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಅದೇ ರೀತಿ, ಯೋಗವನ್ನು ಹಿರಿಯ ಮಾಧ್ಯಮಿಕ ಹಂತದಲ್ಲಿ ಕಡ್ಡಾಯ ವಿಷಯವಾಗಿ ಜಾರಿಗೊಳಿಸಲು ಮಂಡಳಿ ನಿರ್ಧರಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.