ADVERTISEMENT

ಸಿಬಿಎಸ್‌ಇ | 10ನೇ ತರಗತಿ ಫಲಿತಾಂಶ ಇಂದು

ಪಿಟಿಐ
Published 15 ಜುಲೈ 2020, 7:33 IST
Last Updated 15 ಜುಲೈ 2020, 7:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು (ಸಿಬಿಎಸ್‍ಇ) 10ನೇ ತರಗತಿ ಫಲಿತಾಂಶವನ್ನು ಬುಧವಾರ ಪ್ರಕಟಿಸಲಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ (ಎಚ್‌ಆರ್‌ಡಿ) ರಮೇಶ್‌ ನಿಶಾಂಕ್ ಪೋಖ್ರಿಯಾಲ್‌ಅವರು, ‘ವಿದ್ಯಾರ್ಥಿಗಳಿಗೆ ಶುಭವಾಗಲಿ’ ಎಂದು ಹಾರೈಸಿದ್ದಾರೆ.

ಕೋವಿಡ್‌ನಿಂದಾಗಿ, ಬಾಕಿ ಉಳಿದಿದ್ದ ವಿಷಯಗಳ ಪರೀಕ್ಷೆಯನ್ನು ಮಂಡಳಿ ರದ್ದುಪಡಿಸಿತ್ತು. ಹೀಗಾಗಿ, ಪರ್ಯಾಯಮೌಲ್ಯಮಾಪನ ಆಧಾರದಲ್ಲಿ ವಿದ್ಯಾರ್ಥಿಗಳ ಫಲಿತಾಂಶವನ್ನು ಘೋಷಿಸಲಾಗುವುದು ಎಂದು ತಿಳಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.