ADVERTISEMENT

ಸಿಬಿಎಸ್ಇ:10 ಮತ್ತು 12ನೇ ತರಗತಿಯ 29 ಪ್ರಧಾನ ವಿಷಯಗಳಿಗೆ ಮಾತ್ರ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 15:35 IST
Last Updated 1 ಏಪ್ರಿಲ್ 2020, 15:35 IST
ಸಿಬಿಎಸ್‌ಇ
ಸಿಬಿಎಸ್‌ಇ   

ನವದೆಹಲಿ: ಸಿಬಿಎಸ್‌ಇ 10 ಮತ್ತು 12ನೇ ತರಗತಿಗೆ ಪ್ರಧಾನ 29 ವಿಷಯಗಳಿಗೆ ಮಾತ್ರ ಪರೀಕ್ಷೆ ನಡೆಸಲಿದೆ. ಮುಂದಿನ ಶಿಕ್ಷಣ ಪಡೆಯಲು ಬೇಕಾಗಿರುವ ಮತ್ತು ಉತ್ತೀರ್ಣಗೊಳ್ಳಲು ಅತ್ಯಗತ್ಯವಾಗಿರುವ ವಿಷಯಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೊಕ್ರಿಯಾಲ್ ನಿಶಾಂಕ್ ಹೇಳಿದ್ದಾರೆ.

ವಿಶ್ವವಿದ್ಯಾಲಯಗಳಲ್ಲಿ ದಾಖಲಾಗಲು ಬೇಕಾಗಿರುವ ಮತ್ತು ಉತ್ತೀರ್ಣರಾಗಲು ಅಗತ್ಯವಾಗಿರುವ 29 ಪ್ರಧಾನ ವಿಷಯಗಳಿಗೆ ಮಾತ್ರ ಪರೀಕ್ಷೆ ನಡೆಸಲು ಸಿಬಿಎಸ್ಇಗೆ ನಿರ್ದೇಶಿಸಲಾಗಿದೆ. ಮುಂಚಿತವಾಗಿ ನೋಟಿಸ್ ನೀಡಿದ ನಂತರವೇ ಸಿಬಿಎಸ್‌ಇ ಪರೀಕ್ಷೆ ನಡೆಸಲಿದೆ.

ಇನ್ನುಳಿದ ವಿಷಯಗಳಿಗೆ ಸಿಬಿಎಸ್‌ಇ ಪರೀಕ್ಷೆ ನಡೆಸುವುದಿಲ್ಲ. ಅಂಕ ನೀಡುವ ಬಗ್ಗೆ ಅಸೆಸ್‌ಮೆಂಟ್ ಬಗ್ಗೆ ಶೀಘ್ರವೇ ನಿರ್ದೇಶನಗಳನ್ನು ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.